ಬೆಳಗಾವಿ:ಮಕ್ಕಳಿಗೆ ಪೌಷ್ಟಿಕ ಆಹಾರ ಪೂರೈಸದ ಅಂಗನವಾಡಿ ಮೇಲ್ವಿಚಾರಕಿ ಹಾಗೂ ಅಡುಗೆ ಸಹಾಯಕಿಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಚಳಿ ಬಿಡಿಸಿದರು.
ಸಾರಲ್ಲಿ ಸೊಪ್ಪು, ಬೇಳೆ ಎಲ್ಲಿದೆ ತೋರಿಸ್ರಿ... ಅಂಗನವಾಡಿ ಮೇಲ್ವಿಚಾರಕಿಗೆ ಚಳಿ ಬಿಡಿಸಿದ ನಿಂಬಾಳ್ಕರ್
ಅಂಗನವಾಡಿ ಕೇಂದ್ರಕ್ಕೆ ಪೌಷ್ಟಿಕ ಆಹಾರ ವಿತರಣೆಯ ಪರಿಶೀಲನೆಗೆ ತೆರಳಿದ್ದ ಸಂದರ್ಭದಲ್ಲಿ ಸೊಪ್ಪು, ಬೇಳೆ ರಹಿತ ಕಳಪೆ ಆಹಾರ ಪೂರೈಸುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆ ಅಂಗನವಾಡಿ ಮೇಲ್ವಿಚಾರಕಿ ಹಾಗೂ ಅಡುಗೆ ಸಹಾಯಕಿಯನ್ನ ತರಾಟೆಗೆ ತೆಗೆದುಕೊಂಡ ಶಾಸಕಿ ಅಂಜಲಿ ನಿಂಬಾಳ್ಕರ್.
ಖಾನಾಪುರ ತಾಲೂಕಿನ ನಂದಗಡ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಪೌಷ್ಟಿಕ ಆಹಾರ ವಿತರಣೆಯ ಪರಿಶೀಲನೆಗೆ ತೆರಳಿದ್ದ ಸಂದರ್ಭದಲ್ಲಿ ಸೊಪ್ಪು, ಬೇಳೆ ರಹಿತ ಕಳಪೆ ಆಹಾರ ಪೂರೈಸುತ್ತಿರುವುದು ಬೆಳಕಿಗೆ ಬಂದಿದೆ. ಮಕ್ಕಳಿಗೆ ವಿತರಿಸುತ್ತಿರುವ ಸಾಂಬಾರಿನಲ್ಲಿ ಸೊಪ್ಪು, ಬೇಳೆ ಎಲ್ಲಿ ತೋರಿಸಿ ಎಂದು ಸಿಬ್ಬಂದಿಯನ್ನು ಶಾಸಕಿ ತರಾಟೆಗೆ ತೆಗೆದುಕೊಂಡರು.
ಸಾಂಬಾರಿದ್ದ ಪಾತ್ರೆಯಲ್ಲಿ ಚಮಚದಿಂದ ಹುಡುಕಾಡಿದರೂ ಹಿಡಿ ಸೊಪ್ಪು, ಬೇಳೆ ಕಾಣಸಿಗಲಿಲ್ಲ. ಅಂಗನವಾಡಿ ಮಕ್ಕಳಿಗೆ ಸೊಪ್ಪು ರಹಿತ ತಿಳಿನೀರು ಸಾರು, ಕಳಪೆ ಆಹಾರ ಪೂರೈಸುತ್ತಿರುವುದಕ್ಕೆ ಶಾಸಕಿ ಆಕ್ರೋಶ ವ್ಯಕ್ತಪಡಿಸಿದರು. ಅಂಗನವಾಡಿ ಮೇಲ್ವಿಚಾರಕಿ, ಅಡುಗೆ ಸಹಾಯಕಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಶಾಸಕಿ ಸೂಚನೆ ನೀಡಿದರು.