ಬೆಳಗಾವಿ:ಜಿಲ್ಲೆಯ 317 ಗ್ರಾಮಗಳಲ್ಲಿ ಒಟ್ಟು 2,575 ರಾಸುಗಳಲ್ಲಿ ಚರ್ಮ ಗಂಟು ರೋಗ ಕಾಣಿಸಿಕೊಂಡಿದೆ. 33 ಲಕ್ಷ ರೂ. ಪರಿಹಾರ ನೀಡಲು ಹಣದ ಬೇಡಿಕೆ ಇದ್ದು, ಈಗಾಗಲೇ 21.67 ಲಕ್ಷ ರೂ. ಬಿಡುಗಡೆಯಾಗಿದೆ. ಇನ್ನುಳಿದ ಪರಿಹಾರದ ಹಣ ಶೀಘ್ರದಲ್ಲಿಯೇ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ. ಶಶಿಧರ ನಾಡಗೌಡ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ಒಂದು ತಿಂಗಳಿಂದ ಚರ್ಮ ಗಂಟು ರೋಗ ಹರಡುತ್ತಿದೆ. ಬೆಳಗಾವಿ ಜಿಲ್ಲೆಯ 317 ಗ್ರಾಮಗಳ ಜಾನುವಾರುಗಳಿಗೆ ರೋಗ ಕಾಣಿಸಿಕೊಂಡಿದೆ. ಒಟ್ಟು 2,575 ರಾಸುಗಳಲ್ಲಿ ಚರ್ಮ ಗಂಟು ರೋಗ ಕಾಣಿಸಿಕೊಂಡಿದೆ.
ಬೆಳಗಾವಿ ಜಿಲ್ಲೆಯಲ್ಲಿ ರೋಗ ನಿಯಂತ್ರಣದಲ್ಲಿದ್ದು, ಚಿಕಿತ್ಸೆ ನೀಡುತ್ತಿದ್ದೇವೆ. 25,953 ಲಸಿಕೆ ಹಾಕಲಾಗಿದ್ದು, ಇನ್ನುಳಿದ ಲಸಿಕೆಯನ್ನು ಹಾಕುತ್ತಿದ್ದೇವೆ. ಇಲಾಖೆಯಿಂದ ಹಂತ ಹಂತವಾಗಿ ಲಸಿಕೆ ಪೂರಕೆ ಮಾಡಲಾಗುತ್ತಿದೆ. 196 ಜಾನುವಾರುಗಳು ಮೃತಪಟ್ಟಿದ್ದು, ಸರ್ಕಾರಕ್ಕೆ 135 ಹಸುಗಳ ವರದಿ ಸಲ್ಲಿಕೆ ಮಾಡಲಾಗಿದೆ ಎಂದರು.