ಬೆಳಗಾವಿ:ಅನಾರೋಗ್ಯದ ಕಾರಣಕ್ಕೆ ಚೆನ್ನೈ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ, ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಹುಕ್ಕೇರಿ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ ಹಾಗೂ ಶಾಸಕ ದುರ್ಯೋಧನ ಐಹೊಳೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಆನಂದ ಮಾಮನಿ ಬೆಂಗಳೂರಿಗೆ ಶಿಫ್ಟ್: ಹುಕ್ಕೇರಿ ಶ್ರೀಗಳಿಂದ ಆರೋಗ್ಯ ವಿಚಾರಣೆ - ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ
ಅನಾರೋಗ್ಯಕ್ಕೆ ತುತ್ತಾಗಿ ಚೆನ್ನೈಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಆನಂದ ಮಾಮನಿ ಬೆಂಗಳೂರಿಗೆ ಶಿಫ್ಟ್
ಈ ವೇಳೆ ಮಾತನಾಡಿದ ಚಂದ್ರಶೇಖರ ಸ್ವಾಮೀಜಿ, ಉಪಸಭಾಪತಿ ಆನಂದ ಮಾಮನಿ ಅವರ ಆರೋಗ್ಯ ಚೆನ್ನಾಗಿದೆ. ಯಾವುದೇ ಆತಂಕ ಪಡುವ ಅಗತ್ಯತೆ ಇಲ್ಲ. ಆದಷ್ಟು ಬೇಗ ಆನಂದ ಮಾಮನಿ ಗುಣಮುಖರಾಗಲಿ. ಅವರ ಆರೋಗ್ಯ ಚೇತರಿಕೆಗೆ ಎಲ್ಲರೂ ದೇವರಲ್ಲಿ ಪಾರ್ಥನೆ ಮಾಡಬೇಕು. ಕ್ಷೇತ್ರದ ಜನರು ಭಯಪಡುವ ಅವಶ್ಯಕತೆ ಇಲ್ಲ ಎಂದರು.
ಇದನ್ನೂ ಓದಿ: ಆನಂದ ಮಾಮನಿ ವಿಡಿಯೋ ಹೇಳಿಕೆ ಬಿಡುಗಡೆ: ವದಂತಿಗಳಿಗೆ ಕಿವಿಗೊಡದಂತೆ ಮನವಿ