ಕರ್ನಾಟಕ

karnataka

ETV Bharat / state

ಮೂಡಲಗಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಸಮಾವೇಶ - ಚಿಕ್ಕೋಡಿಯಲ್ಲಿ ಪೌರತ್ವ ವಿರೋಧಿ ಸಮಾವೇಶ

ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ಮಾಜಿ ಕೆಎಎಸ್​ ಅಧಿಕಾರಿಗಳ ನೇತೃತ್ವದಲ್ಲಿ ಸಿಎಎ ಮತ್ತು ಎಸ್ಆರ್​ಸಿ ಕುರಿತಾಗಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಧರ್ಮ ನಿರಪೇಕ್ಷಣೆ ಮತ್ತು ರಾಷ್ಟ್ರೀಯ ಭಾವೈಕ್ಯತೆ ಕಾರ್ಯಕ್ರಮ ನಡೆಸಲಾಯಿತು.

ಪೌರತ್ವ ವಿರೋಧಿ ಸಮಾವೇಶ
An anti-citizenship conference

By

Published : Jan 8, 2020, 9:29 PM IST

ಚಿಕ್ಕೋಡಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಮಾನ ಮನಸ್ಕ ಸಮಾಜವಾದಿ ಹಾಗೂ ಪ್ರಗತಿಪರ ಸಂಘಟನೆಗಳು ಸಂವಿಧಾನ ತಿದ್ದುಪಡಿ ಧರ್ಮ ನಿರಪೇಕ್ಷಣೆ ಮತ್ತು ರಾಷ್ಟ್ರೀಯ ಭಾವೈಕ್ಯತೆ ಕಾರ್ಯಕ್ರಮ ನಡೆಸಿದವು.

ಮೂಡಲಗಿಯಲ್ಲಿ ಮಾಜಿ ಕೆಎಎಸ್ ಅಧಿಕಾರಿ ನೇತೃತ್ವದಲ್ಲಿ ಪೌರತ್ವ ವಿರೋಧಿ ಸಮಾವೇಶ

ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ಮಾಜಿ ಕೆಎಎಸ್​ ಅಧಿಕಾರಿ ನೇತೃತ್ವದಲ್ಲಿ ಸಿಎಎ ಮತ್ತು ಎಸ್ಆರ್​ಸಿ ಕುರಿತಾಗಿ ಸಂವಿಧಾನ ತಿದ್ದುಪಡಿ ಧರ್ಮ ನಿರಪೇಕ್ಷಣೆ ಮತ್ತು ರಾಷ್ಟ್ರೀಯ ಭಾವೈಕ್ಯತೆ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಕೆಎಎಸ್​ ಅಧಿಕಾರಿ ಅರವಿಂದ ದಳವಾಯಿ, ಪೌರತ್ವ ಕಾಯ್ದೆ ಮತ್ತು ನಿಯೋಜಿತ ರಾಷ್ಟ್ರೀಯ ನೋಂದಣಿ ಅಭಿಯಾನ ಇವೆರಡು ಸಂವಿಧಾನ ವಿರೋಧಿ. ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಇದು ಬಡವರಿಗೆ, ಹಳ್ಳಿ ಜನರಿಗೆ, ದಲಿತರಿಗೆ, ಕೂಲಿ ಕಾರ್ಮಿಕರಿಗೆ ಈ ಕಾನೂನಿನ ಬಗ್ಗೆ ಮಾಹಿತಿ ಇಲ್ಲ. ಇದರ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು.

ಎಂಬಿಬಿಎಸ್ ವಿದ್ಯಾರ್ಥಿನಿ ನಜಮಾ ನಜೀರ್​ ಮಾಧ್ಯಮದವರೊಂದಿಗೆ ಮಾತನಾಡಿ, ಜಿಲ್ಲೆಗೆ ಬಂದ ನೆರೆಯಿಂದ ಎಷ್ಟೋ ಜನರು ತಮ್ಮ ಬದುಕನ್ನೇ ಕಳೆದುಕೊಂಡಿದ್ದಾರೆ. 37 ಸಾವಿರ ಕೋಟಿ ಪರಿಹಾರ ಬೇಕು ಎಂದು ಕೇಳಿದಾಗ ಕೇವಲ 3 ಸಾವಿರ ಕೋಟಿ ರೂಪಾಯಿಯನ್ನು ಕೊಟ್ಟಿದ್ದಾರೆ. ಹಸಿದವರ ಮೂಗಿಗೆ ಬೆಣ್ಣೆ ಹಚ್ಚುವ ಕೆಲಸವನ್ನು ಪ್ರಧಾನಿ ಮಾಡಿದ್ದಾರೆ. ಸಂವಿಧಾನದ ವಿರೋಧಿ ಕಾಯ್ದೆಯನ್ನು ಹಿಂದಕ್ಕೆ ಪಡೆದುಕೊಳ್ಳಿ ಎಂದು ಒತ್ತಾಯಿಸಿದರು.

ABOUT THE AUTHOR

...view details