ಕರ್ನಾಟಕ

karnataka

ETV Bharat / state

ನಾಳೆ ರಾಜ್ಯಕ್ಕೆ ಅಮಿತ್​ ಶಾ: ಎಡಿಜಿಪಿ ಅಲೋಕ್‌ ಕುಮಾರ್‌ ಮಹತ್ವದ ಸಭೆ - ಈಟಿವಿ ಭಾರತ ಕನ್ನಡ

ಜನವರಿ 28 ರಂದು ಅಮಿತ್​ ಶಾ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಡಿಜಿಪಿ ಅಲೋಕ್​ ಕುಮಾರ್​ ಅವರಿಂದು ಪೊಲೀಸ್​ ಅಧಿಕಾರಿಗಳ ಜೊತೆ ಬಿಗಿ ಬಂದೋಬಸ್ತ್​ ಕುರಿತು ಸಭೆ ನಡೆಸಿದರು.

Alok Kumar
ಎಡಿಜಿಪಿ ಅಲೋಕ್​ ಕುಮಾರ್

By

Published : Jan 27, 2023, 11:33 AM IST

Updated : Jan 27, 2023, 11:53 AM IST

ನಾಳೆ ರಾಜ್ಯಕ್ಕೆ ಅಮಿತ್​ ಶಾ: ಭದ್ರತೆ ಕುರಿತು ಸಭೆ

ಬೆಳಗಾವಿ:ರಾಜ್ಯಕ್ಕೆ ಕೇಂದ್ರ ಗೃಹ ಖಾತೆ ಸಚಿವ ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ಬಂದೋಬಸ್ತ್ ಕುರಿತು ಪೊಲೀಸ್ ಅಧಿಕಾರಿಗಳೊಂದಿಗೆ ಎಡಿಜಿಪಿ ಅಲೋಕ್ ಕುಮಾರ್ ಅವರು ಬೆಳಗಾವಿಯ ಕಮೀಷನರ್​ ಕಚೇರಿಯಲ್ಲಿ ಇಂದು ಸಭೆ ನಡೆಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಅಮಿತ್​ ಶಾ ಅವರು ಜನವರಿ 28 ರಂದು ರಾಜ್ಯಕ್ಕೆ ಆಗಮಿಸಲಿದ್ದು, ರಾಜ್ಯದ ನಾಲ್ಕು ಕಡೆಗಳಿಗೆ ಭೇಟಿ ನೀಡಲಿದ್ದಾರೆ. ನಾಳೆ ಅವರು ಹುಬ್ಬಳ್ಳಿ-ಧಾರವಾಡಕ್ಕೆ ತಲುಪಲಿದ್ದು, ಅಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಬಳಿಕ ಹುಬ್ಬಳ್ಳಿಯ ಭೂಮರೆಡ್ಡಿ ಇಂಜಿನಿಯರಿಂಗ್​ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ" ಎಂದರು.

"ಇದಾದ ನಂತರ ಧಾರವಾಡದಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ಶಾಸ್ತ್ರ ವಿಶ್ವವಿದ್ಯಾಲಯ ಕ್ಯಾಂಪಸ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವರು. ಕುಂದಗೋಳದ ರೋಡ್​ ಶೋದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಂದ ತೆರಳಿ ಎಂಕೆ ಹುಬ್ಬಳ್ಳಿಗೆ ಬರಲಿದ್ದಾರೆ. ಅಲ್ಲಿ ಸಾರ್ವಜನಿಕ ಕಾರ್ಯಕ್ರಮವಿದೆ. ಅಲ್ಲಿಂದ ಬೆಳಗಾವಿಗೆ ಬಂದು ತಮ್ಮ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸವರು. 29ರ ರಾತ್ರಿ 10 ಗಂಟೆಗೆ ರಾಜ್ಯದಿಂದ ತೆರಳಲಿದ್ದಾರೆ" ಎಂದು ಮಾಹಿತಿ ನೀಡಿದರು.

"ಸಂಬಂಧಪಟ್ಟ ಜಿಲ್ಲೆಗಳಲ್ಲಿ ಪೊಲೀಸ್​ ಬಿಗಿಬಂದೋಬಸ್ತ್​ ಇರಲಿದೆ. ಡಿಐಜಿ, ಐಜಿಪಿ ಮತ್ತು ಎಸ್​ಪಿಗಳನ್ನು ಬೇರೆ ಬೇರೆ ಜಿಲ್ಲೆಗಳಿಂದ ಕರೆಸಿಕೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಹೆಚ್ಚಿನ ಕ್ರಮಗಳನ್ನು ಕೈಗೊಂಡಿದ್ದೇವೆ. ಅದೇ ನಿಟ್ಟಿನಲ್ಲಿ ನಮ್ಮ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿ ನಿರ್ದೇಶನ ಕೊಟ್ಟಿದ್ದೇವೆ" ಎಂದು ತಿಳಿಸಿದರು.

ಇದನ್ನೂ ಓದಿ:'ನಾನು ಸುಳ್ಳು ಭರವಸೆ ನೀಡುವ ಮುಖ್ಯಮಂತ್ರಿಯಲ್ಲ': ಕಾಗಿನೆಲೆ ಶ್ರೀಗಳಿಗೆ ಸಿಎಂ ಬೊಮ್ಮಾಯಿ ಸ್ಪಷ್ಟನೆ

ಸಚಿವ ಅಶೋಕ್​ ಹೇಳಿದ್ದೇನು?: "ಪ್ರಧಾನಿ ಮೋದಿ ಮತ್ತು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸುಭದ್ರ ಆಡಳಿತ ಕೊಡುತ್ತೇವೆ. ಮೋದಿ, ಅಮಿತ್​ ಶಾ ಬಂದ ಕಡೆಯೆಲ್ಲ ಕಮಲ ಅರಳುತ್ತೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಶಾಸಕರು ಗೆಲ್ಲುವುದಕ್ಕೆ ಸಿಎಂ ಹಾಗೂ ಪಕ್ಷದ ಮುಖಂಡರ ಜೊತೆ ಚರ್ಚೆ ಮಾಡಲಾಗಿದೆ" ಎಂದು ಮಂಡ್ಯದಲ್ಲಿ ನಿನ್ನೆ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಸಚಿವ ಆರ್.ಅಶೋಕ್‌ ಹೇಳಿದ್ದರು.

ಇದನ್ನೂ ಓದಿ:ಕಲಬುರಗಿ ಉತ್ತರ ಕ್ಷೇತ್ರದ ಟಿಕೆಟ್ ಘೋಷಣೆ ವಿವಾದ: ನಿರಾಣಿ ವಿರುದ್ಧ ಮಾಲಿಕಯ್ಯ ಆಕ್ರೋಶ

Last Updated : Jan 27, 2023, 11:53 AM IST

ABOUT THE AUTHOR

...view details