ಬೆಳಗಾವಿ : ಸಿದ್ದರಾಮಯ್ಯ ಅವರ ಶಾಸಕಾಂಗ ಪಕ್ಷದ ನಾಯಕತ್ವದಲ್ಲಿ ಸರ್ಕಾರ ಸುಭದ್ರವಾಗಿದ್ದು, ನೂರು ಜನ ಅಮಿತ್ ಶಾ ಬಂದರು ನಮ್ಮ ಸರ್ಕಾರ ಕೆಡವಲು ಸಾಧ್ಯವಿಲ್ಲ ಎಂದು ಸಚಿವ ಆರ್.ಬಿ ತಿಮ್ಮಾಪುರ ಹೇಳಿದ್ದಾರೆ.
ನೂರು ಅಮಿಶ್ ಶಾ ಬಂದ್ರು ಮೈತ್ರಿ ಕೆಡುವಲು ಸಾಧ್ಯವಿಲ್ಲ : ಸಚಿವ ತಿಮ್ಮಾಪುರ - ಸಚಿವ ತಿಮ್ಮಾಪುರ
ನೂರು ಜನ ಅಮಿತ್ ಶಾ ಬಂದರೂ ನಮ್ಮ ಸಮ್ಮಿಶ್ರ ಸರ್ಕಾರವನ್ನು ಪತನ ಮಾಡಲು ಸಾಧ್ಯವಿಲ್ಲ ಎಂದು ಸಚಿವ ತಿಮ್ಮಾಪುರ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪನವರಿಗೆ ಸರ್ಕಾರದ ತಪ್ಪುಗಳನ್ನು ತಿದ್ದುವುದನ್ನು ಬಿಟ್ಟು ಹೋದಲ್ಲಿ ಬಂದಲ್ಲಿ ಸಿದ್ದರಾಮಯ್ಯನವರನ್ನು ನಿಂಧಿಸುತ್ತಿದ್ದಾರೆ ಎಂದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಪತನ ಮಾಡಲು ಬಿಜೆಪಿ ಸಾಕಷ್ಟು ಪರಿಶ್ರಮ ಪಟ್ಟು ವಿಫಲವಾಗಿದೆ. ಹಿಂದೆ ಅನೇಕ ಗಡುವು ನೀಡಿ ಮಂತ್ರಿಯಾಗಲು ಶ್ರಮಪಟ್ಟು ಸುಮ್ಮನೆ ಕುಳಿತಿದ್ದಾರೆ. ಇನ್ನೂ ಮುಂದೆಯೂ ನಮ್ಮ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ.
ಈಶ್ವರಪ್ಪ ಸಿದ್ದರಾಮಯ್ಯನವರನ್ನು ಬೈದು ನಾಯಕನಾಗಲು ಹೊರಟಿದ್ದಾರೆ. ಈಶ್ವರಪ್ಪ ಅವರಿಗೆ ವಿರೋಧ ಪಕ್ಷದಲ್ಲಿದ್ದು ಸರ್ಕಾರವನ್ನು ತಿದ್ದುವ ಕೆಲಸ ಮಾಡದೇ, ಹೋದಲ್ಲಿ ಬಂದಲ್ಲಿ ಸಿದ್ದರಾಮಯ್ಯನವರನ್ನು ಬೈಯ್ಯುವುದೇ ಅವರ ಕೆಲಸ. ಇದರಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.