ಬೆಳಗಾವಿ: ಕ್ಷೇತ್ರದಲ್ಲಿ ರಾಜಕೀಯ ಬದಲಾವಣೆಯಾದರೆ ಬೆಳಗಾವಿಯನ್ನು ಬದಲಾವಣೆಗೊಳಿಸುವ ಕನಸು ಕಂಡಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹೇಳಿದರು.
ಜನರು ಮೌಢ್ಯದಿಂದ ಹೊರಬರಬೇಕು. ಬುದ್ದ, ಬಸವಣ್ಣ, ಅಂಬೇಡ್ಕರ್ ಸೇರಿದಂತೆ ಅನೇಕ ಮಹಾನಾಯಕರ ವಿಚಾರಧಾರೆಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ಆಗ ಮಾತ್ರ ನಾವು ಮಾಡುವ ಜಯಂತಿಗೆ ಮೆರುಗು ಬರಲು ಸಾಧ್ಯ ಎಂದರು.
ಇದನ್ನೂ ಓದಿ: ಸ್ಟ್ರಾಂಗ್ ರೂಮ್ ಸುತ್ತಲೂ ಬಿಗಿ ಭದ್ರತೆ, ಸಿಸಿಟಿವಿ ಕ್ಯಾಮರಾ ಕಣ್ಗಾವಲು: ಚುನಾವಣಾಧಿಕಾರಿ
ದೇವರ ಮೊರೆ ಹೋಗುವುದು ನಂಬಿಕೆ. ಆದರೆ, ಸರಸ್ವತಿ ಪೂಜೆ ಮಾಡಿದರೆ ನಮ್ಮ ಮಕ್ಕಳು ಪಾಸ್ ಆಗಲಿದ್ದಾರೆ ಎನ್ನುವುದು ಮೂಡನಂಭಿಕೆ. ನಂಬಿಕೆಯೇ ಬೇರೆ, ಮೂಢನಂಬಿಕೆಯೇ ಬೇರೆ. ನಾವು ಯಾವುದೇ ಜಾತಿ, ಧರ್ಮ, ಸಮುದಾಯಕ್ಕೆ ಸೀಮಿತವಾಗಿಲ್ಲ. ಎಲ್ಲಾ ಸಮಾಜದವರನ್ನು ಸಮಾನವಾಗಿ ನೋಡುತ್ತೇವೆ. ಸಮಾಜದಲ್ಲಿ ಸಮಾನತೆ ತರಬೇಕು ಎನ್ನುವ ನಿಟ್ಟಿನಲ್ಲಿ ಹೋರಾಟ ನಡೆಸಿದ್ದೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.