ಕರ್ನಾಟಕ

karnataka

ದೂಧ್‌ ಸಾಗರ ಬಳಿ ಹಳಿ ತಪ್ಪಿದ ಅಮರಾವತಿ ಎಕ್ಸ್‌ಪ್ರೆಸ್ ರೈಲು ; ತಪ್ಪಿದ ಭಾರೀ ದುರಂತ

By

Published : Jan 18, 2022, 5:54 PM IST

ವಿಷಯ ತಿಳಿದ ತಕ್ಷಣ ಕ್ಯಾಸಲ್‌ರಾಕ್‌ನಿಂದ ಅಪಘಾತ ಪರಿಹಾರ ರೈಲು (ಎಆರ್‌ಟಿ) ಹಾಗೂ ವೈದ್ಯಕೀಯ ಸಲಕರಣೆ ಹೊತ್ತ ವ್ಯಾನ್ ಘಟನಾ ಸ್ಥಳಕ್ಕೆ ದೌಡಾಯಿಸಿದೆ. ರೈಲಿನಲ್ಲಿದ್ದ ಪ್ರಯಾಣಿಕರಿಗೆ ಬೆಳಗ್ಗೆ ಉಪಾಹಾರ ಹಾಗೂ ಊಟ ಪೂರೈಕೆ ಮಾಡಲಾಗಿದೆ..

Amaravati Express derailed near Goa's Dudhsagar
ದೂಧ್‌ ಸಾಗರ ಬಳಿ ಹಳಿ ತಪ್ಪಿದ ಅಮರಾವತಿ ಎಕ್ಸ್‌ಪ್ರೆಸ್

ಬೆಳಗಾವಿ :ವಾಸ್ಕೊ ಮತ್ತು ಹೌರಾ ನಡುವೆ ಸಂಚರಿಸುವ ಅಮರಾವತಿ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ ಘಟನೆ ಗೋವಾದ ದೂಧ್‌ಸಾಗರ- ಕಾರಂಜೋಲ್ ಮಾರ್ಗ ಮಧ್ಯೆ ಮಂಗಳವಾರ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಇಂದು ಬೆಳಗ್ಗೆ 6.30ಕ್ಕೆ ವಾಸ್ಕೊದಿಂದ ಹೊರಟ್ಟಿದ್ದ ರೈಲು 8.50ರ ಸುಮಾರಿಗೆ ದೂಧ್‌ಸಾಗರ ದಾಟಿದೆ. ಅಲ್ಲಿಂದ ಕಾರಂಜೋಲ್‌ ಕಡೆಗೆ ಹೊರಟ ರೈಲಿನ ಮುಂಭಾಗದ ಚಕ್ರಗಳು ಹಳಿ ತಪ್ಪಿವೆ.

ವಿಷಯ ತಿಳಿದ ತಕ್ಷಣ ಕ್ಯಾಸಲ್‌ರಾಕ್‌ನಿಂದ ಅಪಘಾತ ಪರಿಹಾರ ರೈಲು (ಎಆರ್‌ಟಿ) ಹಾಗೂ ವೈದ್ಯಕೀಯ ಸಲಕರಣೆ ಹೊತ್ತ ವ್ಯಾನ್ ಘಟನಾ ಸ್ಥಳಕ್ಕೆ ದೌಡಾಯಿಸಿದೆ. ರೈಲಿನಲ್ಲಿದ್ದ ಪ್ರಯಾಣಿಕರಿಗೆ ಬೆಳಗ್ಗೆ ಉಪಾಹಾರ ಹಾಗೂ ಊಟ ಪೂರೈಕೆ ಮಾಡಲಾಗಿದೆ.

ರೈಲು ಸಿಬ್ಬಂದಿ ಪರ್ಯಾಯ ಇಂಜಿನ್ ಬಳಸಿ 11.30ರ ಹೊತ್ತಿಗೆ ಅಮರಾವತಿ ಎಕ್ಸ್‌ಪ್ರೆಸ್‌ ರೈಲಿನ ಕಾರ್ಯಾಚರಣೆ ಪೂರ್ಣಗೊಳಿಸಿ, ಪ್ರಯಾಣಿಕರಿದ್ದ ಬೋಗಿಗಳನ್ನು ಕುಲೇಂಗೆ ಕಳಿಸಲಾಯಿತು.

ಅಲ್ಲಿ ಬೇರೆ ಎಂಜಿನ್‌ ವ್ಯವಸ್ಥೆ ಮಾಡಿ ಮಧ್ಯಾಹ್ನ 2 ಗಂಟೆಗೆ ರೈಲು ಕುಲೇಂನಿಂದ ಮತ್ತೆ ಸಂಚಾರ ಆರಂಭಿಸಿತು. ಇದೇ ಮಾರ್ಗದಲ್ಲಿ ಸಂಚರಿಸಬೇಕಿದ್ದ ಎರ್ನಾಕುಲಂ-ಪುಣೆ ಎಕ್ಸ್‌ಪ್ರೆಸ್‌ ರೈಲು ಸಂಚಾರದಲ್ಲಿ ವಿಳಂಬವಾಯಿತು.

ಇದನ್ನೂ ಓದಿ:'ಮೇಕೆದಾಟು' ಬಳಿಕ 'ಮಹಾದಾಯಿ' ಜಾರಿಗಾಗಿ ಕಾಂಗ್ರೆಸ್​ನಿಂದ ಬೃಹತ್ ಪಾದಯಾತ್ರೆ: ಸತೀಶ್ ಜಾರಕಿಹೊಳಿ‌

ABOUT THE AUTHOR

...view details