ಕರ್ನಾಟಕ

karnataka

ETV Bharat / state

'ವ್ಯಾಸಂಗ ಮುಂದುವರೆಸಲು ಭಾರತದಲ್ಲಿ ಅವಕಾಶ ಮಾಡಿಕೊಡಿ' - ukraine russia war

ಬೆಳಗಾವಿ ಜಿಲ್ಲೆಯ 19 ವಿದ್ಯಾರ್ಥಿಗಳು ಉಕ್ರೇನಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ. ಎಲ್ಲರಿಗೂ ಇಲ್ಲೇ ವ್ಯಾಸಂಗಕ್ಕೆ ಅವಕಾಶ ಮಾಡಿಕೊಡಬೇಕು. ಉಕ್ರೇನ್​ನಲ್ಲಿ ಶಿಕ್ಷಣಕ್ಕೆ ನೀಡುತ್ತಿದ್ದ ಶುಲ್ಕವನ್ನೇ ಸರ್ಕಾರ ನಿಗದಿಪಡಿಸಿದರೆ ಅನುಕೂಲವಾಗುತ್ತದೆ ಎಂದು ವಿದ್ಯಾರ್ಥಿಯೊಬ್ಬರು ಮನವಿ ಮಾಡಿದರು.

Allow India to continue studying
ಪ್ರಜ್ವಲ್ ತಿಪ್ಪಣ್ಣವರ

By

Published : Mar 4, 2022, 4:18 PM IST

ಬೆಳಗಾವಿ: ಯುದ್ಧಪೀಡಿತ ಉಕ್ರೇನಿನಿಂದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ವೈದ್ಯಕೀಯ ವಿದ್ಯಾರ್ಥಿ ಸುರಕ್ಷಿತವಾಗಿ ಮನೆಗೆ ತಲುಪಿದ್ದಾರೆ.

ಬೈಲಹೊಂಗಲ ಪಟ್ಟಣದ ಪ್ರಜ್ವಲ್ ತಿಪ್ಪಣ್ಣವರ ಉಕ್ರೇನಿನ ಟೆರ್ನೋಪಿಲ್ ನ್ಯಾಶನಲ್ ಮೆಡಿಕಲ್ ಕಾಲೇಜಿನಲ್ಲಿ ನಾಲ್ಕನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಟೆರ್ನೋಪಿಲ್​ನಿಂದ ಮುಂಬೈ ಮಾರ್ಗವಾಗಿ ಪ್ರಜ್ವಲ್ ಬೆಳಗಾವಿಗೆ ಆಗಮಿಸಿದ್ದಾರೆ.


ಪುತ್ರ ಸುರಕ್ಷಿತವಾಗಿ ಆಗಮಿಸಿದ್ದಕ್ಕೆ ಕುಟುಂಬಸ್ಥರು, ಸಂಬಂಧಿಕರು ಹರ್ಷ ವ್ಯಕ್ತಪಡಿಸಿದರು. ಪುತ್ರನನ್ನು ಕರೆತಂದ ಕೇಂದ್ರ-ರಾಜ್ಯ ಸರ್ಕಾರಕ್ಕೆ ಕುಟುಂಬಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರಜ್ವಲ್ ತಿಪ್ಪಣ್ಣವರ ಮನೆಗೆ ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪ್ರಜ್ವಲ್ ತಿಪ್ಪಣ್ಣವರ, ಬೆಳಗಾವಿ ಜಿಲ್ಲೆಯ 19 ವಿದ್ಯಾರ್ಥಿಗಳು ಉಕ್ರೇನಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ. ಎಲ್ಲರಿಗೂ ಇಲ್ಲೇ ವ್ಯಾಸಂಗಕ್ಕೆ ಅವಕಾಶ ಮಾಡಿಕೊಡಬೇಕು. ಉಕ್ರೇನ್​ನಲ್ಲಿ ಶಿಕ್ಷಣಕ್ಕೆ ನೀಡುತ್ತಿದ್ದ ಶುಲ್ಕವನ್ನೇ ಸರ್ಕಾರ ನಿಗದಿಪಡಿಸಿದರೆ ಅನುಕೂಲವಾಗುತ್ತದೆ ಎಂದು ವಿನಂತಿಸಿದರು.

ಇದನ್ನೂ ಓದಿ:ಬಜೆಟ್: UPSC ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಆನ್​ಲೈನ್ ಕೋಚಿಂಗ್

ABOUT THE AUTHOR

...view details