ಬೆಳಗಾವಿ: ನಾಳೆಯಿಂದ ರಾಜ್ಯಾದ್ಯಂತ ದೇವಸ್ಥಾನಗಳು ತೆರೆಯಲಿದ್ದು ಬೆಳಗಾವಿಯ ಸುಪ್ರಸಿದ್ಧ ಕಪಿಲೇಶ್ವರ ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.
ನಾಳೆ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನ ಓಪನ್: ಆಡಳಿತ ಮಂಡಳಿಯಿಂದ ಸಿದ್ಧತೆ - Belgaum News
ನಾಳೆಯಿಂದ ರಾಜ್ಯಾದ್ಯಂತ ದೇವಸ್ಥಾನಗಳು ತೆರೆಯಲಿರುವ ಹಿನ್ನೆಲೆಯಲ್ಲಿ ಬೆಳಗಾವಿಯ ಸುಪ್ರಸಿದ್ಧ ಕಪಿಲೇಶ್ವರ ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು ಭಕ್ತರ ಸ್ವಾಗತಕ್ಕೆ ಸಿದ್ಧತಾ ಕಾರ್ಯಗಳನ್ನು ನಡೆಸುತ್ತಿದ್ದಾರೆ.
ನಾಳೆ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನ ಓಪನ್: ಆಡಳಿತ ಮಂಡಳಿಯಿಂದ ಸಿದ್ಧತೆ
ದೇವಸ್ಥಾನದ ಸುತ್ತ ಸ್ಯಾನಿಟೈಸ್ ಮಾಡಲಾಗಿದೆ. ಇದರ ಜೊತೆಗೆ ವಾತಾವರಣ ಶುದ್ಧೀಕರಣಕ್ಕಾಗಿ ಇಂದು ಕಪಿಲೇಶ್ವರ ದೇಗುಲ ಆವರಣದಲ್ಲಿ ಕಾಲಸರ್ಪ ಹವನಕ್ಕೆ ಆಡಳಿತ ಮಂಡಳಿ ಸಿದ್ಧತಾ ಕಾರ್ಯಗಳನ್ನು ನಡೆಸಿದೆ.
ನಾಳೆಯಿಂದ ದೇವರ ಸನ್ನಿಧಾನಕ್ಕೆ ಆಗಮಿಸುವ ಭಕ್ತರು ಮಾಸ್ಕ್ ಧರಿಸುವುದು ಕಡ್ಡಾಯವೆಂದು ಸೂಚಿಸಲಾಗಿದೆ.