ಕರ್ನಾಟಕ

karnataka

ETV Bharat / state

ಭರ್ಜರಿ ಮಳೆಯಿಂದ ಜಲಾಶಯಗಳೆಲ್ಲ ಭರ್ತಿ; ಕಡಿಮೆಯಾದ ನದಿಗಳ ಒಳ ಹರಿವು - Rain Report

ಕೊಯ್ನಾ ಜಲಾಶಯ ಶೇ. 98, ವಾರಣಾ ಜಲಾಶಯ ಶೇ.98, ರಾಧಾನಗರಿ ಜಲಾಶಯ ಶೇ. 96, ಕಣೇರ ಜಲಾಶಯ ಶೇ. 99, ಧೂಮ ಜಲಾಶಯ ಶೇ. 98, ಪಾಟಗಾಂವ್ ಶೇ. 99 ಧೂದಗಂಗಾ ಶೇ.100ರಷ್ಟು ತುಂಬಿವೆ..

All reservoirs are filled with heavy rain
ಕಡಿಮೆಯಾದ ನದಿಗಳ ಒಳ ಹರಿವು

By

Published : Sep 11, 2020, 4:37 PM IST

Updated : Sep 11, 2020, 5:25 PM IST

ಚಿಕ್ಕೋಡಿ : ಮಳೆ ಪ್ರಮಾಣದಲ್ಲಿ ಹಾಗೂ-ಹೀಗೂ ಇದ್ದುದರಿಂದ ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳ ಹರಿವಿನಲ್ಲಿ ಸ್ವಲ್ಪ ಕಡಿಮೆಯಾಗಿದೆ. 41,000 ಅಧಿಕ ಕ್ಯೂಸೆಕ್​ಗಿಂತ ಹೆಚ್ಚು ಕೃಷ್ಣಾ ನದಿ ಒಳ ಹರಿವು ಇದೆ ಎಂದು ತಹಶೀಲ್ದಾರ್​ ಸುಭಾಷ್‌ ಸಂಪಗಾಂವಿ ಮಾಹಿತಿ ನೀಡಿದ್ದಾರೆ.

ಈಟಿವಿ ಭಾರತದ ಜತೆ ಮಾತನಾಡಿದ ಅವರು, ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್​ನಿಂದ 36,250 ಕ್ಯೂಸೆಕ್, ದೂಧಗಂಗಾ ನದಿಯಿಂದ 5,632 ಕ್ಯೂಸೆಕ್ ಹೀಗೆ ಒಟ್ಟು 41,000 ಕ್ಯೂಸೆಕ್ ಅಧಿಕ ನೀರು ರಾಜ್ಯದ ಕೃಷ್ಣಾ ನದಿಗೆ ಹರಿದು ಬರುತ್ತಿದೆ.

ಮಹಾರಾಷ್ಟ್ರದ ಕೊಯ್ನಾ-1ಮಿ.ಮೀ, ನವಜಾ-1 ಮಿ.ಮೀ, ಮಹಾಬಲೇಶ್ವರ-21 ಮಿ.ಮೀ, ವಾರಣಾ- 00 ಮಿ.ಮೀ, ಕಾಳಮ್ಮವಾಡಿ-58 ಮಿ.ಮೀ, ರಾಧಾನಗರಿ-40 ಮಿ.ಮೀ, ಪಾಟಗಾಂವ್​ನಲ್ಲಿ-3 ಮಿ.ಮೀ ಮಳೆಯಾಗಿರುವ ವರದಿಯಾಗಿದೆ.

ಭರ್ಜರಿ ಮಳೆಯಿಂದ ಜಲಾಶಯಗಳೆಲ್ಲ ಭರ್ತಿ

ಸದ್ಯ ಕೊಯ್ನಾ ಜಲಾಶಯ 98%, ವಾರಣಾ ಜಲಾಶಯ 98%, ರಾಧಾನಗರಿ ಜಲಾಶಯ 96%, ಕಣೇರ ಜಲಾಶಯ 99%, ಧೂಮ ಜಲಾಶಯ 98%, ಪಾಟಗಾಂವ್ 99% ಧೂದಗಂಗಾ 100%, ತುಂಬಿದೆ. ಹಿಪ್ಪರಗಿ ಬ್ಯಾರೇಜ್​ನಿಂದ 35,000 ಹಾಗೂ ಆಲಮಟ್ಟಿ ಜಲಾಶಯದಿಂದ 62,000 ಕ್ಯೂಸೆಕ್ ನೀರು ಹೊರಗಡೆ ಬಿಡಲಾಗುತ್ತಿದೆ ಎಂದರು.

Last Updated : Sep 11, 2020, 5:25 PM IST

ABOUT THE AUTHOR

...view details