ಚಿಕ್ಕೋಡಿ:ಅಖಿಲ ಕರ್ನಾಟಕ ವೀರಶೈವ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ತಾಲೂಕಿನ ಚಂದೂರ ಟೇಕ ಗ್ರಾಮದ ಪ್ರವಾಹ ಸಂತ್ರಸ್ತ ಕುಟುಂಬಗಳಿಗೆ ಗೃಹೋಪಯೋಗಿ ವಸ್ತುಗಳನ್ನು ನೀಡಲಾಯಿತು.
ನೆರೆ ಸಂತ್ರಸ್ತರಿಗೆ ಸಹಾಯಹಸ್ತ ನೀಡಿದ ಅಖಿಲ ಕರ್ನಾಟಕ ವೀರಶೈವ ಸಂಘಟನೆ - akhila karnataka veershaiva sangatane
ಅಖಿಲ ಕರ್ನಾಟಕ ವೀರಶೈವ ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಚಿಕ್ಕೋಡಿ ತಾಲೂಕಿನ ಚಂದೂರ ಟೇಕ ಗ್ರಾಮದ ಪ್ರವಾಹ ಸಂತ್ರಸ್ತ ಕುಟುಂಬಗಳಿಗೆ ಗೃಹೋಪಯೋಗಿ ವಸ್ತುಗಳನ್ನು ನೀಡಲಾಯಿತು.
![ನೆರೆ ಸಂತ್ರಸ್ತರಿಗೆ ಸಹಾಯಹಸ್ತ ನೀಡಿದ ಅಖಿಲ ಕರ್ನಾಟಕ ವೀರಶೈವ ಸಂಘಟನೆ](https://etvbharatimages.akamaized.net/etvbharat/prod-images/768-512-4239227-thumbnail-3x2-kpl.jpg)
ನೆರೆ ಸಂತ್ರಸ್ಥರಿಗೆ ಸಹಾಯಹಸ್ತ
ನೆರೆ ಸಂತ್ರಸ್ಥರಿಗೆ ಸಹಾಯಹಸ್ತ
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷೆ ರತ್ನಪ್ರಭ ಬೆಲ್ಲದ ಅವರು, ಕೃಷ್ಣಾ ನದಿ ಪ್ರವಾಹದ ಹಿನ್ನೆಲೆಯಲ್ಲಿ ನದಿ ತೀರ ಭಾಗದ ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಅವರಿಗೆ ಜೀವನಾವಶ್ಯಕ ವಸ್ತುಗಳನ್ನು ನೀಡುತ್ತಿದ್ದೇವೆ.ಅಷ್ಟೇ ಅಲ್ಲದೆ, ಅವರ ಪರಿಸ್ಥಿತಿಯು ಶೀಘ್ರವೇ ಸುಧಾರಣೆಯಾಗಲೆಂದು ಹಾರೈಸಿದರು.