ಕರ್ನಾಟಕ

karnataka

ETV Bharat / state

ಬೆಳಗಾವಿ ವಾಯುನೆಲೆ ತರಬೇತಿ ಕೇಂದ್ರದಲ್ಲೇ ಗುಂಡುಹಾರಿಸಿಕೊಂಡು ಏರ್‌ಮೆನ್ ಆತ್ಮಹತ್ಯೆ - ಬೆಳಗಾವಿ ಭಾರತೀಯ ವಾಯುನೆಲೆ

ಭಾರತೀಯ ವಾಯುನೆಲೆಯಲ್ಲಿ ಕಳೆದ 9 ವರ್ಷಗಳಿಂದ ಸಂದೀಪ್‌ಕುಮಾರ್ ಸೇವೆ ಸಲ್ಲಿಸುತ್ತಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮಾರಿಹಾಳ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ..

Airman commits suicide by firing at Belgaum
ಏರ್ ಮನ್ ಆತ್ಮಹತ್ಯೆ

By

Published : Aug 30, 2021, 4:01 PM IST

ಬೆಳಗಾವಿ :ನಗರದ ಸಾಂಬ್ರಾ ಭಾರತೀಯ ವಾಯುನೆಲೆ ತರಬೇತಿ ಕೇಂದ್ರದಲ್ಲಿ ಸಿಬ್ಬಂದಿಯೋರ್ವರ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಸಾಂಬ್ರಾ ಗ್ರಾಮದಲ್ಲಿರುವ ಭಾರತೀಯ ವಾಯುನೆಲೆ ತರಬೇತಿ ಕೇಂದ್ರದಲ್ಲಿ ಏರ್‌ಮೆನ್ ಆಗಿ ಸೇವೆ ಸಲ್ಲಿಸುತ್ತಿದ್ದ ಹರಿಯಾಣ ಮೂಲದ ಸಂದೀಪ್‌ಕುಮಾರ್ ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ಕರ್ತವ್ಯದಲ್ಲಿರುವಾಗಲೇ ಇಂದು ಮಧ್ಯಾಹ್ನ ತಲೆಗೆ ಗುಂಡು ಹಾರಿಸಿಕೊಂಡು ಸಂದೀಪ್‌ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಭಾರತೀಯ ವಾಯುನೆಲೆಯಲ್ಲಿ ಕಳೆದ 9 ವರ್ಷಗಳಿಂದ ಸಂದೀಪ್‌ಕುಮಾರ್ ಸೇವೆ ಸಲ್ಲಿಸುತ್ತಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮಾರಿಹಾಳ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details