ಚಿಕ್ಕೋಡಿ:ತಾಲೂಕಿನ ಮಾಂಜರಿವಾಡಿ ಗ್ರಾಮದಲ್ಲಿ ಕೃಷಿ ಇಲಾಖೆ ಚಿಕ್ಕೋಡಿ ಇವರ ಆಶ್ರಯದಲ್ಲಿ ರೈತರಿಗಾಗಿ ಕೃಷಿ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ಮಾಂಜರಿವಾಡಿ ಗ್ರಾಮದಲ್ಲಿ ರೈತರಿಗಾಗಿ ಕೃಷಿ ಪ್ರದರ್ಶನ! - Agricultural fair
ಮಾಂಜರಿವಾಡಿ ಗ್ರಾಮದ ಲಕ್ಷ್ಮಿ, ಸರಸ್ವತಿ, ಗಣೇಶ ದೇವರ ಜಾತ್ರೆಯ ಅಂಗವಾಗಿ ಗಡಿಭಾಗದಲ್ಲಿ ರೈತರಿಗೆ ಹೆಚ್ಚಿನ ಅನುಕೂಲವಾಗಲಿ ಎಂದು ಕೃಷಿ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.
ಮಾಂಜರಿವಾಡಿ ಗ್ರಾಮದ ಲಕ್ಷ್ಮಿ, ಸರಸ್ವತಿ, ಗಣೇಶ ದೇವರ ಜಾತ್ರೆಯ ಅಂಗವಾಗಿ ಗಡಿಭಾಗದಲ್ಲಿ ರೈತರಿಗೆ ಹೆಚ್ಚಿನ ಅನುಕೂಲವಾಗಲಿ ಎಂದು ಕೃಷಿ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಈ ಪ್ರದರ್ಶನಕ್ಕೆ ಚಿಕ್ಕೋಡಿ ತಹಶೀಲ್ದಾರ ಎಸ್.ಎಸ್ ಸಂಪಗಾವಿ ಚಾಲನೆಯನ್ನು ನೀಡಿದರು.
ಹಸುಗಳ ಪ್ರದರ್ಶನವನ್ನು ಸಹ ಆಯೋಜನೆಯನ್ನು ಮಾಡಲಾಗಿದ್ದು, ಸುಮಾರು 200 ಕ್ಕಿಂತ ಹೆಚ್ಚು ಹಸುಗಳು ಈ ಮೇಳದಲ್ಲಿದ್ದವು. ಇದರಲ್ಲಿ ಜಲಸಿ, ದೇಶಿಯ ಸೇರಿದಂತೆ ವಿವಿಧ ಜಾತಿಯ ಹಸುಗಳು ಪಾಲ್ಗೊಂಡಿದ್ದವು. ರೈತರು ಹೆಚ್ಚಿನ ಪ್ರಮಾಣದಲ್ಲಿ ಈ ಕೃಷಿ ಪ್ರದರ್ಶನದಲ್ಲಿ ಪಾಲ್ಗೊಂಡು ಕೃಷಿಗೆ ಬೇಕಾಗುವ ಸಾಮಗ್ರಿಗಳನ್ನು ಖರೀದಿ ಮಾಡಿದರು.