ಕರ್ನಾಟಕ

karnataka

ETV Bharat / state

ಕತ್ತಲಿನಿಂದ ಬೆಳಕಿಗೆ ಬರುವಷ್ಟರಲ್ಲಿ ಮತ್ತೆ ನೆರೆ ಭೀತಿ: ಕಂಗಾಲಾದ‌ ಸಂತ್ರಸ್ತರು - ಬೆಳಗಾವಿ ಜಿಲ್ಲೆ

ಎರಡು ಬಾರಿ ಪ್ರವಾಹದ ಹೊಡೆತಕ್ಕೆ ನಲುಗಿದ ನೆರೆ ಸಂತ್ರಸ್ತರಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮತ್ತೆ ಭಯ ಆವರಿಸಿದೆ.

ಕತ್ತಲಿನಿಂದ ಬೆಳಕಿನ ಕಡೆ ಬರುವಷ್ಟರಲ್ಲಿ ಮತ್ತೆ ನೆರೆ ಭೀತಿ: ಕಂಗಾಲಾದ‌ ನೆರೆ ಸಂತ್ರಸ್ತರು

By

Published : Sep 8, 2019, 11:05 PM IST

ಚಿಕ್ಕೋಡಿ:ಭೀಕರ ಪ್ರವಾಹದಿಂದ ಬೆಳಗಾವಿ ಜಿಲ್ಲೆಯ ಹಲವೆಡೆ ವಿದ್ಯುತ್‌ ವ್ಯವಸ್ಥೆ ಪೂರ್ಣ ಕಡಿತಗೊಂಡ ಹಿನ್ನೆಲೆ ಸತತ ಒಂದೂವರೆ ತಿಂಗಳಿಂದ ಜನರು ಕತ್ತಲಲ್ಲಿ ಜೀವನ ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಹೆಸ್ಕಾಂ ಅಧಿಕಾರಿಳು ದುರಸ್ತಿ ಕಾರ್ಯದಲ್ಲಿ ತೊಡಗಿದ್ದು, ಗ್ರಾಮಗಳು ಮತ್ತೆ ಬೆಳಕು ಕಂಡಿವೆ. ಆದರೆ, ಹಳೆಯ ಆಘಾತದಿಂದ ಚೇತರಿಸಿಕೊಳ್ಳುವುದರೊಳಗೆ ಮತ್ತೆ ಈಗ ಪ್ರವಾಹದ ಭೀತಿ ಎದುರಾಗಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.

ಕತ್ತಲಿನಿಂದ ಬೆಳಕಿನ ಕಡೆ ಬರುವಷ್ಟರಲ್ಲಿ ಮತ್ತೆ ನೆರೆ ಭೀತಿ: ಕಂಗಾಲಾದ‌ ಸಂತ್ರಸ್ತರು

ಹೌದು, ಪ್ರವಾಹದಿಂದ ನದಿ ದಡದ ನೂರಾರು ವಿದ್ಯುತ್‌ ಕಂಬಗಳು ಧರೆಗೆ ಉರುಳಿದ್ದವು. ಅನೇಕ ವಿದ್ಯುತ್‌ ಪರಿವರ್ತಕಗಳು ಸಂಪೂರ್ಣ ಪ್ರವಾಹದಲ್ಲಿ ಮುಳುಗಿದ್ದವು. ನಂತರ ಬೆಂಗಳೂರಿನಿಂದ ಹೆಚ್ಚಿನ ಕಾರ್ಮಿಕರನ್ನು ಕರೆಸಿಕೊಂಡು ಸುಮಾರು ನೂರಕ್ಕೂ ಅಧಿಕ ಕಾರ್ಮಿಕರಿಂದ ವಿದ್ಯುತ್‌ ಸಂಪರ್ಕ ವ್ಯವಸ್ಥೆ ಸರಿಪಡಿಸುವಲ್ಲಿ ಶಕ್ತಿ ಮೀರಿ ಪ್ರಯತ್ನಿಸಲಾಗುತ್ತಿದೆ. ಸದ್ಯ ಹೆಸ್ಕಾಂನಿಂದ ತೋಟ ಪಟ್ಟಿಯ ಕುಡಿಯುವ ನೀರಿನ ಘಟಕ ಹಾಗೂ ಮನೆಗಳಿಗೆ ಪರ್ಯಾಯ ವ್ಯವಸ್ಥೆಯ ಮೂಲಕ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ.

ಈಗಾಗಲೇ ನದಿ ತೀರದ ಸಾವಿರಾರು ಮಕ್ಕಳು ಹತ್ತನೇ ತರಗತಿ, ಪಿಯುಸಿ, ಪದವಿ ವಿದ್ಯಾಭ್ಯಾಸ ಮಾಡಿ ಪರೀಕ್ಷೆಗೆ ತಯಾರಿ ನಡೆಸಿದ್ದು, ಕಳೆದ‌ ಒಂದೂವರೆ ತಿಂಗಳಿನಿಂದ ಕತ್ತಲಲ್ಲಿ ಜೀವನ ತೆಗೆಯುವಂತಾಗಿದೆ. ಮತ್ತೆ ಪ್ರವಾಹ ಬಂದರೆ ಮನೆಗಳನ್ನು ಬಿಡಬೇಕು. ಇದರಿಂದ ಓದಲು‌ ಹಾಗೂ ಶಾಲೆಗಳಿಗೆ ತೆರಳಲು ಅವಕಾಶ ಇರುವುದಿಲ್ಲ ಮತ್ತು ಇದ್ದ ಪುಸ್ತಕಗಳು ಪ್ರವಾಹದಲ್ಲಿ ಸಿಲುಕಿ ಹಾಳಾಗಿವೆ. ಕತ್ತಲಿನಿಂದ ಬೆಳಕಿನ ಕಡೆಗೆ ಬರಲು ಒಂದೂವರೆ ತಿಂಗಳಾಯಿತು. ಈಗ ಮತ್ತೆ ಪ್ರವಾಹ ಬಂದರೆ ನಮಗೆ ಮತ್ತೆ ಕತ್ತಲೇ ಗತಿ ಎನ್ನುತ್ತಾರೆ ಇಲ್ಲಿನ ನಿರಾಶ್ರಿತರು.

ABOUT THE AUTHOR

...view details