ಬೆಳಗಾವಿ :ನಮ್ಮ ದೇಶಗಳಲ್ಲಿ ಪ್ರಶ್ನೆ ಕೇಳಿದರೆ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತದೆ. ಪ್ರಶ್ನೆ ಮಾಡಿದವರನ್ನು ಗುಂಡಿಟ್ಟು ಕೊಲ್ಲುವ ವ್ಯವಸ್ಥೆ ಈ ದೇಶದಲ್ಲಿದೆ ಅಂತಾನಿಜಗುಣಾನಂದ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ಪ್ರಶ್ನೆ ಕೇಳಿದರೆ ಗುಂಡಿಟ್ಟು ಕೊಲ್ತಾರೆ, ಪ್ರಶ್ನೆ ಮಾಡುವುದೇ ಈಗ ಅಪರಾಧ.. ಶ್ರೀ ನಿಜಗುಣಾನಂದ ಸ್ವಾಮೀಜಿ - ನಿಜಗುಣಾನಂದ ಸ್ವಾಮೀಜಿ
ವಚನ ಸಾಹಿತ್ಯ ಈ ದೇಶದ ಮೂಢನಂಬಿಕೆ ಹೊಡೆದು ಹಾಕುವ ಕೆಲಸ ಮಾಡಿದೆ. ಒಂದು ವೇಳೆ ವಚನ ಸಾಹಿತ್ಯ ಇಲ್ಲದಿದ್ದರೆ ಈ ಸಮಾಜದಲ್ಲಿ ಮೂಢನಂಬಿಕೆಗಳು ತಾಂಡವ ಆಡುತ್ತಿದ್ದವು ಎಂದರು.
ಶ್ರೀ ನಿಜಗುಣಾನಂದ ಸ್ವಾಮೀಜಿ
ಗೋಕಾಕ ನಗರದಲ್ಲಿ ನಡೆಯುತ್ತಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇಂದು ನಡೆದ ವೈಚಾರಿಕ ಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ವೈಚಾರಿಕತೆ ಎಂಬುದು ಕೆಟ್ಟ ಪದ್ಧತಿಯ ವಿರುದ್ಧ ಪ್ರಶ್ನೆ ಮಾಡುವುದು. ಆದರೆ, ನಮ್ಮ ದೇಶದಲ್ಲಿ ಪ್ರಶ್ನೆ ಮಾಡಿವರನ್ನು ವ್ಯವಸ್ಥಿತ ಸಂಚಿನ ಮೂಲಕ ಧ್ವನಿ ಅಡಗಿಸುವ ಕೆಲಸ ಮಾಡಲಾಗುತ್ತಿದೆ. ಇದು ಅಪಾಯಕಾರಿ ಎಂದರು.
ವಚನ ಸಾಹಿತ್ಯ ಈ ದೇಶದ ಮೂಢನಂಬಿಕೆ ಹೊಡೆದು ಹಾಕುವ ಕೆಲಸ ಮಾಡಿದೆ. ಒಂದು ವೇಳೆ ವಚನ ಸಾಹಿತ್ಯ ಇಲ್ಲದಿದ್ದರೆ ಈ ಸಮಾಜದಲ್ಲಿ ಮೂಢನಂಬಿಕೆಗಳು ತಾಂಡವ ಆಡುತ್ತಿದ್ದವು ಎಂದರು.