ಕರ್ನಾಟಕ

karnataka

ETV Bharat / state

ಲಕ್ಷ್ಮಣ ಸವದಿಗೆ ರಾಜು ಕಾಗೆ ಗಾಳ, 'ಕೈ' ಸೇರಿದ ಬಳಿಕ ಕಮಲ ಪಕ್ಷದ ವಿರುದ್ಧ ವಾಕ್ಸಮರ! - ಕಾಂಗ್ರೆಸ್ ಸೇರ್ಪಡೆ ಬಳಿಕ ಸ್ವಗ್ರಾಮಕ್ಕೆ ಆಗಮಿಸಿದ ರಾಜು ಕಾಗೆ

ಕಾಂಗ್ರೆಸ್​ನಿಂದ ಪ್ರಕಾಶ ಹುಕ್ಕೇರಿ ಕಾಗವಾಡ ಕ್ಷೇತ್ರದಿಂದ ಸ್ಪರ್ಧಿಸುವುದು ಕೇವಲ ಊಹಾಪೋಹವಷ್ಟೇ. ಹುಕ್ಕೇರಿ ಚುನಾವಣೆಗೆ ಮಾನಸಿಕವಾಗಿ ತಯಾರಿಲ್ಲ ಎಂದು ರಾಜು ಕಾಗೆ ಹೇಳಿದರು.

ಕಾಂಗ್ರೆಸ್ ಸೇರ್ಪಡೆ ಬಳಿಕ ಸ್ವಗ್ರಾಮಕ್ಕೆ ಆಗಮಿಸಿದ ರಾಜು ಕಾಗೆ

By

Published : Nov 15, 2019, 7:20 PM IST

ಚಿಕ್ಕೋಡಿ:ಕಾಂಗ್ರೆಸ್ ಸೇರ್ಪಡೆ ಬಳಿಕ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಸ್ವಗ್ರಾಮಕ್ಕೆ ಆಗಮಿಸಿದ ರಾಜು ಕಾಗೆ ಬಿಜೆಪಿ ವಿರುದ್ದ ಕಿಡಿ ಕಾರಿದರು.

ಕಾಂಗ್ರೆಸ್ ಸೇರ್ಪಡೆ ಬಳಿಕ ಸ್ವಗ್ರಾಮಕ್ಕೆ ಆಗಮಿಸಿದ ರಾಜು ಕಾಗೆ

ಬಿಜೆಪಿ ಪಕ್ಷದಲ್ಲಿ ತತ್ವ ಸಿದ್ಧಾಂತಗಳು ಉಳಿದಿಲ್ಲ. ಶಾಸಕರನ್ನು ಅನರ್ಹರನ್ನಾಗಿ ಮಾಡಿ ಬಿಎಸ್​ವೈ ಮುಖ್ಯಮಂತ್ರಿ ಆದರು. 17 ಜನ ಅನರ್ಹರಿಗೆ ಟಿಕೆಟ್ ಕೊಟ್ಟಿದ್ದಾರೆ. ಬಿಜೆಪಿ ಪಕ್ಷಕ್ಕೆ ನೈತಿಕತೆನೇ ಇಲ್ಲ, ಕಳೆದ ಬಾರಿ ಚುನಾವಣೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿಗಳು ರಾಜಕಾರಣದಿಂದ ಸತ್ತು ಹೋದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

ಲಕ್ಷ್ಮಣ ಸವದಿ ಅವರಿಗೆ ಕಾಂಗ್ರೆಸ್​ಗೆ ಬರಲು ಆಹ್ವಾನ ನೀಡಿದ್ದೇನೆ. ಆದರೆ, ಅವರು ಬರ್ತೀನಿ ಅಂತಾನೂ ಹೇಳಿಲ್ಲ ನಿರಾಕರಣೆಯೂ ಮಾಡಿಲ್ಲ. ಅವರು ಬಂದ್ರೆ ನಾನೇ ಅವರನ್ನು ಸ್ವಾಗತಿಸುತ್ತೇನೆ. ನಾನು ಕಾಂಗ್ರೆಸ್​ಗೆ ಬಂದು ಒಳ್ಳೆಯ ನಿರ್ಣಯ ತೆಗೆದುಕೊಂಡಿದ್ದೇನೆ ಎಂದರು.

ಸವದಿ ಅವರೂ ಕೂಡ ಒಳ್ಳೆಯ ನಿರ್ಣಯ ತೆಗೆದುಕೊಳ್ಳಬೇಕು. ಅಥಣಿ ಹಾಗೂ ಕಾಗವಾಡ ಎರಡೂ ಕ್ಷೇತ್ರಗಳಿಂದಲೂ ಸ್ಪರ್ಧಿಸಲು ನನಗೆ ಆಹ್ವಾನ ಇದೆ. ಆದರೆ, ನನ್ನ ತವರು ಮನೆ ಕಾಗವಾಡ. ತವರು ಮನೆ ಬಿಟ್ಟು ಹೋಗಲು ನನಗೆ ಇಚ್ಛೆ ಇಲ್ಲ. ಎರಡೂ ಕಡೆ ನನ್ನನ್ನು ನಿಲ್ಲಿಸಿದರೂ ಜನರು ಪ್ರೀತಿಯಿಂದ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು.

ABOUT THE AUTHOR

...view details