ಕರ್ನಾಟಕ

karnataka

ETV Bharat / state

ಪಾಕ್ ಪರ ಘೋಷಣೆ ಪ್ರಕರಣ: ಧಾರವಾಡ ಕೋರ್ಟ್ ಸುತ್ತ 144 ಸೆಕ್ಷನ್ ಜಾರಿ - ಹಿಂಡಲಗಾ ಕೇಂದ್ರ ಕಾರಗ್ರಹಕ್ಕೆ ಭೇಟಿ ನೀಡಿ ಮಾಹಿತಿ ಕಲೆ

ವಕೀಲರು ಆಗಮಿಸಲಿರುವ ಹಿನ್ನೆಲೆ ಧಾರವಾಡ ನ್ಯಾಯಾಲಯದ ಸುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ. ನ್ಯಾಯಾಲಯದ 100 ಮೀಟರ್ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಿ ಹು-ಧಾ ಪೊಲೀಸ್ ಆಯುಕ್ತ ಆರ್.ದಿಲೀಪ್ ಆದೇಶ ಹೊರಡಿಸಿದ್ದಾರೆ.

advocates-who-arrive-on-the-traitors-declaration-visit-the-hindalga-central-jail
ಪಾಕ್ ಪರ ಘೋಷಣೆ ಕೂಗಿದ ಪ್ರಕರಣ: ಧಾರವಾಡ ಕೋರ್ಟ್ ಸುತ್ತ 144 ಸೆಕ್ಷನ್ ಜಾರಿ

By

Published : Feb 28, 2020, 11:39 AM IST

Updated : Feb 28, 2020, 11:57 AM IST

ಧಾರವಾಡ/ಬೆಳಗಾವಿ: ಹುಬ್ಬಳ್ಳಿ ಕಾಲೇಜಿನಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿದ ಪ್ರಕರಣ ಸಂಬಂಧಿಸಿದಂತೆ ಬೆಂಗಳೂರಿನಿಂದ ಆರೋಪಿಗಳ ಪರ ವಕೀಲರು ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗ್ರಹಕ್ಕೆ ಭೇಟಿ ನೀಡಿದ್ದಾರೆ.‌

ಬೆಳ್ಳಂಬೆಳಗ್ಗೆ ಹಿರಿಯ ವಕೀಲರಾದ ಪ್ರಸನ್ನ ಆರ್, ಮೈತ್ರಾಯಿ ಕೃಷ್ಣನ್, ಅವಾಯಿ ಚೌಕ್ಸಿ ಅವರ ತಂಡ ಆರೋಪಿಗಳನ್ನು ಭೇಟಿ ಮಾಡಿ, ವಕಾಲತ್ತು ಪತ್ರಕ್ಕೆ ಸಹಿ ಹಾಕಿಸಿಕೊಂಡಿದೆ. 45 ನಿಮಿಷ ಕಾಲಾವಕಾಶ ನೀಡಿದ್ದ ಹಿಂಡಲಗಾ ಜೈಲು ಅಧಿಕಾರಿಗಳು, ಆರೋಪಿಗಳಿಂದ ಘಟನೆ ಕುರಿತು ವಕೀಲರು ಸಂಪೂರ್ಣ ವಿವರ ಪಡೆದರು. ಪೊಲೀಸ್ ಭದ್ರತೆಯಲ್ಲಿ ವಕೀಲರ ತಂಡ ಧಾರವಾಡಕ್ಕೆ ಹೋಗುತ್ತಿದೆ.

ವಕೀಲರು ಆಗಮಿಸಲಿರುವ ಹಿನ್ನೆಲೆ ಧಾರವಾಡ ನ್ಯಾಯಾಲಯದ ಸುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ. ನ್ಯಾಯಾಲಯದ 100 ಮೀಟರ್ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಿ ಹು-ಧಾ ಪೊಲೀಸ್ ಆಯುಕ್ತ ಆರ್.ದಿಲೀಪ್ ಆದೇಶ ಹೊರಡಿಸಿದ್ದಾರೆ.

ಓರ್ವ ಎಸ್ಪಿ, ಇಬ್ಬರು ಡಿಸಿಪಿ, ಮೂವರು ಡಿವೈಎಸ್​ಪಿ, 10 ಇನ್ಸ್‌ಪೆಕ್ಟರ್ ಸೇರಿದಂತೆ 500 ಜನ ಪೊಲೀಸರ ನಿಯೋಜನೆ ಮಾಡಲಾಗಿದೆ. 5 ಕೆ.ಎಸ್.ಆರ್.ಪಿ, 2 ಸಿಎಆರ್ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಕೋರ್ಟ್​ ಆವರಣಕ್ಕೆ ಪೊಲೀಸ್ ಆಯುಕ್ತ ಆರ್.ದಿಲೀಪ್ ಭೇಟಿ ನೀಡಿ ಭದ್ರತೆ ಪರಿಶೀಲಿಸಿದ್ದಾರೆ.

ಪಾಕ್ ಪರ ಘೋಷಣೆ ಕೂಗಿದ ಪ್ರಕರಣ: ಧಾರವಾಡ ಕೋರ್ಟ್ ಸುತ್ತ 144 ಸೆಕ್ಷನ್ ಜಾರಿ

ವಕೀಲರು ಧಾರವಾಡಕ್ಕೆ ಫೆ-24 ಕ್ಕೆ ಆಗಮಿಸಿದ್ದ ವೇಳೆ ಧಾರವಾಡ ವಕೀಲರ ಸಂಘ ವಿರೋಧ ವ್ಯಕ್ತಪಡಿಸಿತ್ತು. ಈ ವೇಳೆ ಬೆಂಗಳೂರು ವಕೀಲರ ಮೇಲೆ ಕಲ್ಲು ತೂರಾಟ ನಡೆದಿತ್ತು. ಬಳಿಕ ಆರೋಪಿಗಳ ಪರ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದರು. ಬಳಿಕ ಅರ್ಜಿ ಸಲ್ಲಿಸಲು ವಿರೋಧ ಮಾಡದಂತೆ ಧಾರವಾಡ ವಕೀಲರಿಗೆ ಹೈಕೋರ್ಟ್​ ಸೂಚನೆ ನೀಡಿತ್ತು.

Last Updated : Feb 28, 2020, 11:57 AM IST

ABOUT THE AUTHOR

...view details