ಬೆಳಗಾವಿ:ಕರ್ನಾಟಕ ರಾಜ್ಯ ಗ್ರಾಹಕರ ಆಯೋಗ ಕಚೇರಿ ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದರೂ ಈವರೆಗೂ ಜಿಲ್ಲಾಡಳಿತ ಸ್ಥಳ ನಿಗದಿಪಡಿಸಿಲ್ಲ.ಆದ್ದರಿಂದ ತಕ್ಷಣ ಕಚೇರಿ ಆರಂಭಿಸುವಂತೆ ಬೆಳಗಾವಿ ಬಾರ್ ಅಸೊಸಿಯೇಷನ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಗ್ರಾಹಕರ ಆಯೋಗ ಕಚೇರಿಗೆ ಕಟ್ಟಡ ಒದಗಿಸುವಂತೆ ವಕೀಲರಿಂದ ಡಿಸಿಗೆ ಮನವಿ - Karnataka State Consumer Commission office
ಕರ್ನಾಟಕ ರಾಜ್ಯ ಗ್ರಾಹಕರ ಆಯೋಗ ಕಚೇರಿಗೆ ಕಟ್ಟಡ ಒದಗಿಸುವಂತೆ ಬೆಳಗಾವಿ ಬಾರ್ ಅಸೋಸಿಯೇಷನ್ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಬೆಳಗಾವಿ ಬಾರ್ ಅಸೋಸಿಯೇಷನ್ ಪದಾಧಿಕಾರಿಗಳು, 40 ವರ್ಷಗಳ ಹೋರಾಟದ ಫಲವಾಗಿ ಕರ್ನಾಟಕ ರಾಜ್ಯ ಗ್ರಾಹಕರ ಆಯೋಗ ಬೆಳಗಾವಿಯಲ್ಲಿ ಈಗಾಗಲೇ ಸ್ಥಾಪನೆಯಾಗಿದೆ. ಆದರೆ ಇದುವರೆಗೂ ಕಚೇರಿ ಆರಂಭಿಸಲು ಸ್ಥಳ ನಿಗದಿ ಮಾಡಿಲ್ಲ ಎಂದರು.
ಹೀಗಾಗಿ ಸ್ಥಳ ನಿಗದಿಪಡಿಸಿ ಕಚೇರಿ ಆರಂಭಿಸುವ ನಿಟ್ಟಿನಲ್ಲಿ ಅಗತ್ಯ ಪಿಠೋಪಕರಣಗಳನ್ನು ಒದಗಿಸಬೇಕು. ಇಲ್ಲವೇ ಹಳೇ ಜಿಲ್ಲಾ ಪಂಚಾಯತಿ ಕಟ್ಟಡದಲ್ಲಿ ಕಚೇರಿ ಆರಂಭಿಸಬೇಕು. ಕಚೇರಿಗೆ ಸಿಬ್ಬಂದಿ ಕೊರತೆಯಿದ್ದು, ಕಂದಾಯ ಇಲಾಖೆ ಸಿಬ್ಬಂದಿಯನ್ನು ಅಲ್ಲಿಗೆ ನಿಯೋಜಿಸಬೇಕು ಎಂದು ಬಾರ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಆರ್.ಸಿ.ಪಾಟೀಲ್ ಆಗ್ರಹಿಸಿದರು.