ಅಥಣಿ:ಹಲವಾರು ಇಲಾಖೆಗಳಿಗೆ ಡ್ರೋನ್ ಕ್ಯಾಮೆರಾ ಬಳಕೆ ಅತಿಮುಖ್ಯ. ಹಾಗಾಗಿ ಡ್ರೋನ್ ಪ್ರತಾಪ್ ಅವರೇ ಸ್ವತಃ ನಮ್ಮ ದೇಶದ ಇಲಾಖೆಗಳಿಗೆ ಭೇಟಿ ನೀಡಿ ಡ್ರೋನ್ ಕ್ಯಾಮೆರಾದ ಅವಶ್ಯಕತೆಯನ್ನು ತಿಳಿಸಬೇಕಾಗಿದೆ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರು ಯುವ ವಿಜ್ಞಾನಿ ಡ್ರೋನ್ ಪ್ರಖ್ಯಾತ ಪ್ರತಾಪ್ರವರಿಗೆ ಸಲಹೆ ನೀಡಿದರು.
ಅದಮ್ಯ ಫೌಂಡೇಶನ್ ವತಿಯಿಂದ ಅದಮ್ಯೋತ್ಸವ 2020 ಕಾರ್ಯಕ್ರಮ! - adhamyotsava program latest news
ಅಥಣಿ ತಾಲೂಕಿನ ಇಂಗಳಗಾಂವ ಗ್ರಾಮದಲ್ಲಿ ಅದಮ್ಯ ಫೌಂಡೇಶನ್ ವತಿಯಿಂದ ಅದಮ್ಯೋತ್ಸವ 2020 ಕಾರ್ಯಕ್ರಮ ನಡೆಯಿತು. ಈ ವೇಳೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಡ್ರೋನ್ ಕ್ಯಾಮೆರಾ ಬಳಕೆ ಅಗತ್ಯ ಎಷ್ಟರ ಮಟ್ಟಿಗಿದೆಯೆಂಬುದನ್ನು ತಿಳಿಸಿದರು.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಇಂಗಳಗಾಂವ ಗ್ರಾಮದಲ್ಲಿ ಅದಮ್ಯ ಫೌಂಡೇಶನ್ ವತಿಯಿಂದ ನಡೆದ ಅದಮ್ಯೋತ್ಸವ 2020 ಕಾರ್ಯಕ್ರಮದಲ್ಲಿ ಮಾತನಾಡಿದ ಮಹೇಶ್ ಕುಮಟಳ್ಳಿ, ಚಿಕ್ಕ ವಯಸ್ಸಿನ ಡ್ರೋನ್ ಪ್ರತಾಪ್ರವರ ಸಾಧನೆ ಭಾರತ ದೇಶಕ್ಕೆ ಹಿರಿಮೆ. ಡ್ರೋನ್ ಪ್ರತಾಪ್ ಸೇವೆಯನ್ನು ಪಡೆದುಕೊಳ್ಳಬೇಕಿದೆ. ವಿದೇಶಗಳಲ್ಲಿ ಪ್ರತಾಪ್ ಡ್ರೋನ್ ಕ್ಯಾಮೆರಾ ಬಹುಮುಖ್ಯ ಪಾತ್ರ ವಹಿಸಿದೆಯೆಂದರು.
ವಿದೇಶಗಳಲ್ಲಿ ಡ್ರೋನ್ ಕ್ಯಾಮೆರಾಗಳ ಬಳಕೆ ಹಾಗೂ ಸೇವೆಗಳ ಬಗ್ಗೆ ನಮ್ಮ ದೇಶದ ಹಲವಾರು ಇಲಾಖೆಗಳಿಗೆ ಭೇಟಿ ನೀಡಿ ತಿಳಿಸಬೇಕು. ಡ್ರೋನ್ ಬಗ್ಗೆ ಸರ್ಕಾರದ ಗಮನಕ್ಕೆ ತಂದು ನಮ್ಮ ದೇಶದೆಲ್ಲೆಡೆ ನಿಮ್ಮ ಡ್ರೋನ್ ಸದ್ಭಳಕೆಯಾಗಲಿ, ಜನಸಾಮಾನ್ಯರಿಗೂ ಸಹಕಾರವಾಗಲಿ, ಇದರಿಂದ ದೇಶಕ್ಕೆ ಒಳ್ಳೆಯದಾಗಲಿ ಎಂದು ಮಹೇಶ್ ಕುಮಟಳ್ಳಿ ಡ್ರೋನ್ ಪ್ರತಾಪರಿಗೆ ಸಲಹೆ ನೀಡಿದರು. ಈ ವೇಳೆ ಯುವ ವಿಜ್ಷಾನಿ ಪ್ರತಾಪ್ರವರಿಗೆ ಸನ್ಮಾನಿಸಲಾಯಿತು.