ಕರ್ನಾಟಕ

karnataka

ETV Bharat / state

ಬೆಳಗಾವಿ ಗಡಿಗೆ ಎಡಿಜಿಪಿ ಉಮೇಶ್ ಕುಮಾರ್ ಭೇಟಿ, ಪರಿಶೀಲನೆ.. - ADGP Umesh Kumar visits chikkodi Border

ಬೆಳಗಾವಿ ಜಿಲ್ಲಾಡಳಿತ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಜನರ ಸುರಕ್ಷತೆಗಾಗಿ ಬಿಗಿ ಕ್ರಮಗಳನ್ನ ಸರ್ಕಾರ ಕೈಗೊಂಡಿದೆ. ಜನರು ಸಹಕಾರ ನೀಡಬೇಕು. ರಾಜ್ಯಕ್ಕೆ ಬರುವ ಮುನ್ನ ಕಡ್ಡಾಯ ಆರ್​ಟಿಪಿಸಿಆರ್​ ನೆಗೆಟಿವ್ ವರದಿ ತರಲೇಬೇಕು..

adgp-umesh-kumar-visited-the-belgaum-border
ಬೆಳಗಾವಿ ಗಡಿಗೆ ಭೇಟಿ ನೀಡಿದ ಎಡಿಜಿಪಿ ಉಮೇಶ್ ಕುಮಾರ್

By

Published : Aug 3, 2021, 3:59 PM IST

Updated : Aug 3, 2021, 4:30 PM IST

ಚಿಕ್ಕೋಡಿ :ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕುಗನೊಳ್ಳಿ ಚೆಕ್​ಪೋಸ್ಟ್​ಗೆ ಎಡಿಜಿಪಿ ಉಮೇಶ್ ಕುಮಾರ್​ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಹಾರಾಷ್ಟ್ರದಿಂದ ಬರುವವರಿಗೆ ಕಡ್ಡಾಯವಾಗಿ ನೆಗೆಟಿವ್ ವರದಿ ಹೊಂದಿರುವ ಆದೇಶ ಹಿನ್ನೆಲೆಯಲ್ಲಿ‌ ಗಡಿಯಲ್ಲಿ ತಪಾಸಣೆ ಕೈಗೊಂಡ ಕ್ರಮಗಳ ಕುರಿತು ಪರಿಶೀಲಿಸಿದರು. ಉಮೇಶ್ ಕುಮಾರ್ ಜೊತೆ ಬೆಳಗಾವಿ ಡಿಸಿ ಎಂ ಜಿ ಹಿರೇಮಠ, ಎಸ್‌ಪಿ ಲಕ್ಷ್ಮಣ ನಿಂಬರಗಿ ಸಾಥ್​ ನೀಡಿದರು.

ಎಡಿಜಿಪಿ ಉಮೇಶ್ ಕುಮಾರ್

ಬೆಳಗಾವಿ ಜಿಲ್ಲಾಡಳಿತ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಜನರ ಸುರಕ್ಷತೆಗಾಗಿ ಬಿಗಿ ಕ್ರಮಗಳನ್ನ ಸರ್ಕಾರ ಕೈಗೊಂಡಿದೆ. ಜನರು ಸಹಕಾರ ನೀಡಬೇಕು. ರಾಜ್ಯಕ್ಕೆ ಬರುವ ಮುನ್ನ ಕಡ್ಡಾಯ ಆರ್​ಟಿಪಿಸಿಆರ್​ ನೆಗೆಟಿವ್ ವರದಿ ತರಲೇಬೇಕು.

ತುರ್ತಾಗಿ ಕರ್ನಾಟಕ ಪ್ರವೇಶ ಮಾಡುವವರಿಗೂ ಕೂಡ ತಪಾಸಣೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಸಣ್ಣ ಪ್ರಮಾಣದ 23 ಚೆಕ್​ಪೋಸ್ಟ್​ಗಳ ಮೇಲೆ ನಿಗಾವಹಿಸಲಾಗಿದೆ ಎಂದು ಹೇಳಿದರು.

ಓದಿ:ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಅರುಣ್ ಸಿಂಗ್ ಭೇಟಿ ಮಾಡಿದ ಸಿಎಂ ಬೊಮ್ಮಾಯಿ

Last Updated : Aug 3, 2021, 4:30 PM IST

ABOUT THE AUTHOR

...view details