ಕರ್ನಾಟಕ

karnataka

ETV Bharat / state

ತರ್ಲೆ ಮಾಡಿದ್ರೆ ಕಠಿಣ ಕ್ರಮ: ಎಂಇಎಸ್ ಪುಂಡರಿಗೆ ಎಡಿಜಿಪಿ ಅಲೋಕ್​ ಕುಮಾರ್ ವಾರ್ನಿಂಗ್ - ADGP Alok Kumar warning to MES rowdies

ಅಧಿವೇಶನ ಹಾಗೂ ಗಡಿ ವಿಷಯದಲ್ಲಿ ತರ್ಲೆ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಡಿಜಿಪಿ ಅಲೋಕ್​ ಕುಮಾರ್ ಎಂಇಎಸ್ ಪುಂಡರಿಗೆ ವಾರ್ನಿಂಗ್ ಕೊಟ್ಟಿದ್ದಾರೆ.

adgp-alok-kumar-warning-to-mes-rowdies
ತರ್ಲೆ ಮಾಡಿದ್ರೆ ಕಠಿಣ ಕ್ರಮ; ಎಂಇಎಸ್ ಪುಂಡರಿಗೆ ಎಡಿಜಿಪಿ ಅಲೋಕ್​ ಕುಮಾರ್ ವಾರ್ನಿಂಗ್

By

Published : Nov 29, 2022, 6:30 PM IST

ಬೆಳಗಾವಿ: ಅಧಿವೇಶನ ಹಾಗೂ ಗಡಿ ವಿಷಯದಲ್ಲಿ ತರ್ಲೆ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಂಇಎಸ್ ಪುಂಡರಿಗೆ ಎಡಿಜಿಪಿ ಅಲೋಕ್​ ಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಇಎಸ್ ಪುಂಡರೇ ಇರಲಿ ಬೇರೆ ಯಾರೇ ಇರಲಿ ತರ್ಲೆ ಮಾಡಿದ್ರೆ ಕಠಿಣ ಕ್ರಮ ನಿಶ್ಚಿತ.
ಡಿಸೆಂಬರ್ 3ರಂದು ಬೆಳಗಾವಿಗೆ ಮಹಾರಾಷ್ಟ್ರ ಸಚಿವದ್ವಯರು ಆಗಮಿಸುವ ವಿಚಾರಕ್ಕೆ ಸಂಬಂಧಿಸಿ, ಅವರು ಏನಾದರೂ ತರ್ಲೆ, ತಂಟೆ ಮಾಡೋದಕ್ಕೆ ಬಂದರೆ ಖಂಡಿತ ಕ್ರಮ ತಗೆದುಕೊಳ್ಳುತ್ತೇವೆ.

ಇನ್ನು ಖಾಸಗಿ ಕಾರ್ಯಕ್ರಮಕ್ಕೆ ಬರುವುದಾದರೆ ಬಂದು ಹೋಗಲಿ. ಒಂದು ವೇಳೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಪ್ರಯತ್ನಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

ಡಿಸೆಂಬರ್ 19ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಇದೆ. ನಮ್ಮ ಅಧಿಕಾರಿಗಳು ಈಗಾಗಲೇ ಸಭೆ ನಡೆಸಿ ಸಿದ್ಧತೆ ಮಾಡಿಕೊಂಡಿದ್ದಾರೆ. ನಾವೂ ಸಹ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ. ಅಧಿವೇಶನದ ವೇಳೆ ಯಾವುದೇ ಅಹಿತಕರ ಘಟನೆ ಆಗಬಾರದು. ಅಧಿವೇಶನ ಸಂದರ್ಭದಲ್ಲಿ ಬಹಳಷ್ಟು ಪ್ರತಿಭಟನೆಗಳು ನಡೆಯುತ್ತವೆ. ರೈತರು, ಪಂಚಮಸಾಲಿ, ಮಾದಿಗ ದಂಡೋರಾ ಸಮಿತಿ ಈ ರೀತಿ ಬೇರೆ ಬೇರೆ ಪ್ರತಿಭಟನೆಗಳು ಇವೆ. ಯಾವುದೇ ಅನಾಹುತ ಆಗಬಾರದು. ಕಳೆದ ವರ್ಷ ಕಲ್ಲು ತೂರಾಟ ಆಗಿತ್ತು. ಆ ರೀತಿ ಘಟನೆ ಮರುಕಳಿಸಬಾರದು. ಅದಕ್ಕೊಸ್ಕರ ನಾವು ವ್ಯವಸ್ಥೆ ಮಾಡುತ್ತೇವೆ ಎಂದರು.

ಅಧಿವೇಶನ ವೇಳೆ ಭದ್ರತೆಗೆ ನಾಲ್ಕು ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡುತ್ತೇವೆ. ಏಳೆಂಟು ಎಸ್‌ಪಿ, 38 ಡಿವೈಎಸ್‌ಪಿ, 80 ಇನ್ಸ್‌ಪೆಕ್ಟರ್ ಸೇರಿ ಸಾಕಷ್ಟು ಜನ ಅಧಿಕಾರಿಗಳ ಭದ್ರತೆ ಇರಲಿದೆ. ಪೊಲೀಸರಿಗೆ ಟೆಂಟ್ ಹೌಸ್‌ನಲ್ಲಿ ವಸತಿ ವ್ಯವಸ್ಥೆ ಇರಲಿದೆ. ಎಂಇಎಸ್‌ನವರು ಶಾಂತಿಯುತ ಪ್ರತಿಭಟನೆ ನಡೆಸಲು ಯಾವುದೇ ಅಡೆ ತಡೆ ಇಲ್ಲ. ಯಾವುದೇ ತರ್ಲೆ ತರಾಟೆ ಮಾಡಲು ಹೋದರೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದರು.

ಇದನ್ನೂ ಓದಿ:ಕೊರೊನಾ ಲಸಿಕೆ ಪಡೆಯುವುದು ಜನರ ಆಯ್ಕೆಗೆ ಬಿಟ್ಟಿದ್ದು, ಕಾನೂನಿನ ಒತ್ತಡವಿಲ್ಲ: ಸುಪ್ರೀಂಗೆ ಕೇಂದ್ರ ಸರ್ಕಾರ ಸ್ಪಷ್ಟನೆ

ABOUT THE AUTHOR

...view details