ಚಿಕ್ಕೋಡಿ :ಪಿಕೆಪಿಎಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಪಿಕೆಪಿಎಸ್ ನಿರ್ದೇಶಕ ರಾಜು ಮಾನೆ ಹೇಳಿದರು.
ಗೈರಾದ ಇಂಗಳಿ ಪಿಕೆಪಿಎಸ್ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು : ರಾಜು ಮಾನೆ - ಇಂಗಳಿ ಪಿಕೆಪಿಎಸ್ ಬ್ಯಾಂಕ್ ಸಮಸ್ಯೆ
ಪಿಕೆಪಿಎಸ್ ಬ್ಯಾಂಕ್ ಸಿಬ್ಬಂದಿ ಕಳೆದ ಎರಡು ದಿನಗಳಿಂದ ಕರ್ತವ್ಯಕ್ಕೆ ಗೈರಾಗಿ ರೈತರಿಗೆ, ಗ್ರಾಹಕರಿಗೆ, ಸಿಬ್ಬಂದಿ ತೊಂದರೆ ನೀಡುತ್ತಿದ್ದಾರೆ. ಇವರ ವಿರುದ್ಧ ಪ್ರಕರಣ ದಾಖಲಿಸಿ, ಸೂಕ್ತವಾದ ಕ್ರಮವನ್ನು ಜರುಗಿಸಲಾಗುವುದು ಎಂದು ಪಿಕೆಪಿಎಸ್ ನಿರ್ದೇಶಕ ರಾಜು ಮಾನೆ ತಿಳಿಸಿದರು.
ತಾಲೂಕಿನ ಇಂಗಳಿ ಗ್ರಾಮದ ಪಿಕೆಪಿಎಸ್ ಬ್ಯಾಂಕ್ ಸಿಬ್ಬಂದಿ ಕಳೆದ ಎರಡು ದಿನಗಳಿಂದ ಕರ್ತವ್ಯಕ್ಕೆ ಗೈರಾಗಿದ್ದು, ಬ್ಯಾಂಕ್ ಬಾಗಿಲು ಮುಚ್ಚಲಾಗಿದೆ. ಇದರಿಂದ ರೈತರಿಗೆ, ಗ್ರಾಹಕರಿಗೆ, ಸಿಬ್ಬಂದಿ ತೊಂದರೆ ನೀಡುತ್ತಿದ್ದಾರೆ. ಇವರ ವಿರುದ್ಧ ಪ್ರಕರಣ ದಾಖಲಿಸಿ, ಸೂಕ್ತವಾದ ಕ್ರಮವನ್ನು ಜರುಗಿಸಲಾಗುವುದು ಎಂದು ಪಿಕೆಪಿಎಸ್ ನಿರ್ದೇಶಕ ರಾಜು ಮಾನೆ ತಿಳಿಸಿದರು.
ಇಂಗಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕಿನ ಸಿಬ್ಬಂದಿ ಹಾಗೂ ನಿರ್ದೇಶಕರ ಮಧ್ಯೆ ಮುಸುಕಿನ ಗುದ್ದಾಟ ನಡೆದಿದೆ. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ರೇಷನ್ ಪಡೆಯಲು ರೈತರು ಒಂದು ದಿನ ಕೆಲಸ ಬಿಡಬೇಕಾಗುತ್ತದೆ. ಹೀಗಿರುವಾಗ ಪಿಕೆಪಿಎಸ್ ಸಿಬ್ಬಂದಿಯ ವರ್ತನೆ ಸರಿಯಲ್ಲ ಎಂದು ರಾಜು ಮಾನೆ ಆಕ್ರೋಶ ವ್ಯಕ್ತಪಡಿಸಿದರು.