ಕರ್ನಾಟಕ

karnataka

ETV Bharat / state

ಮೂಡಲಗಿಯಲ್ಲಿ ಪತ್ತೆಯಾಗಿದ್ದು ಗಂಡು ಭ್ರೂಣಗಳು: ಬೆಳಗಾವಿ ಜಿಲ್ಲಾಧಿಕಾರಿ - belagavi foetuses found case

ಮೂಡಲಗಿಯ ಹಳ್ಳದಲ್ಲಿ ಪತ್ತೆಯಾಗಿರುವುದು ಗಂಡು ಭ್ರೂಣಗಳಾಗಿರುವುದರಿಂದ ಹೆಣ್ಣು ಭ್ರೂಣ ಹತ್ಯೆ ಅಲ್ಲ ಎಂಬುದು ವೈದ್ಯಕೀಯ ತಜ್ಞರ ವರದಿಯಲ್ಲಿ ಬಯಲಾಗಿದೆ.

action-on-seven-foetuses-found-case-belagavi-dc-nitesh-patil
ಮೂಡಲಗಿಯಲ್ಲಿ ಪತ್ತೆಯಾಗಿದ್ದು ಗಂಡು ಭ್ರೂಣಗಳು: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

By

Published : Jun 25, 2022, 10:12 PM IST

Updated : Jun 25, 2022, 10:40 PM IST

ಬೆಳಗಾವಿ:ಮೂಡಲಗಿಯ ಹಳ್ಳದಲ್ಲಿ ಪತ್ತೆಯಾಗಿರುವುದು ಗಂಡು ಭ್ರೂಣಗಳಾಗಿರುವುದರಿಂದ ಹೆಣ್ಣು ಭ್ರೂಣ ಹತ್ಯೆ ಅಲ್ಲ ಎಂಬುದು ತಿಳಿದಿದೆ. 6 ಗಂಡು ಭ್ರೂಣಗಳು ಸ್ಥೂಲ‌ ಜನ್ಮಜಾತ ಬೆಳವಣಿಗೆಯ ವೈಪರೀತ್ಯ ಹೊಂದಿರುವುದು ವೈದ್ಯಕೀಯ ತಜ್ಞರ ವರದಿಯಲ್ಲಿ ತಿಳಿದುಬಂದಿದೆ.

ಫಾರ್ಮಾಲಿನ್ ಬಳಸಿ ಸಂಗ್ರಹಾಲಯದಲ್ಲಿ ಶೇಖರಿಸಿಡುವ ಪ್ರಯತ್ನ ಮೇಲ್ನೋಟಕ್ಕೆ ಕಂಡುಬಂದಿದೆ. ಆದಾಗ್ಯೂ ಭ್ರೂಣಗಳನ್ನು ಹೇಗೆ ಸಂಗ್ರಹಿಸಲಾಯಿತು ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು. ಇದು‌‌ ಕಾನೂನು ಬಾಹಿರ ಆಗಿರುವುದರಿಂದ ತನಿಖೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್​ ತಿಳಿಸಿದ್ದಾರೆ.

ಮೂಡಲಗಿ ಪಟ್ಟಣದಲ್ಲಿ 6 ಭ್ರೂಣಗಳ ಮೃತದೇಹ ಹಾಗೂ ಒಂದು ಗರ್ಭಕೋಶವನ್ನು ಹಳ್ಳದಲ್ಲಿ ತೇಲಿ ಬಿಟ್ಟಿರುವ ಹೀನಕೃತ್ಯ ಶುಕ್ರವಾರ ಬೆಳಕಿಗೆ ಬಂದಿತ್ತು. ಭ್ರೂಣಗಳ ಮೃತದೇಹಗಳನ್ನು ಕೀಚಕರು ಹಳ್ಳಕ್ಕೆ ಚೆಲ್ಲಿದ್ದರು. ಡಬ್ಬದಲ್ಲಿ ಹಾಕಿ ಹಳ್ಳಕ್ಕೆ ಬಿಡಲಾಗಿದ್ದು, ಶವ ನೋಡಿದ ಜನ ಬೆಚ್ಚಿಬಿದ್ದಿದ್ದರು.

ಸ್ಕ್ಯಾನಿಂಗ್ ಸೆಂಟರ್ ಸೀಜ್:ಪ್ರಕರಣದ ಹಿನ್ನೆಲೆಯಲ್ಲಿ ಮೂಡಲಗಿ ಪಟ್ಟಣದಲ್ಲಿರುವ ವೆಂಕಟೇಶ್ ಹೆರಿಗೆ ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರ್ ಸೀಜ್ ಮಾಡಲಾಗಿದೆ. ಭ್ರೂಣಗಳು ಮೂರು ವರ್ಷಗಳ ಹಿಂದೆ ಅಬಾರ್ಷನ್ ಮಾಡಿದ್ದವುಗಳು ಎಂಬ ವಿಚಾರ ಪ್ರಾಥಮಿಕ ತನಿಖೆ ವೇಳೆ ಬಯಲಾಗಿದೆ. ಪೊಲೀಸರ ದಾಳಿ ಭೀತಿಯಿಂದ ಕಳೆದ ಜೂನ್ 23ರಂದು ರಾತ್ರೋರಾತ್ರಿ ಭ್ರೂಣಗಳನ್ನು ಐದು ಡಬ್ಬಿಗಳಲ್ಲಿ ಆಸ್ಪತ್ರೆ ಸಿಬ್ಬಂದಿ ಹಳ್ಳಕ್ಕೆ ಎಸೆದಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಆಸ್ಪತ್ರೆ ಸೀಜ್ ಮಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ಮೂಡಲಗಿ ಪಟ್ಟಣದಲ್ಲಿ 7 ಭ್ರೂಣಗಳ ಪತ್ತೆ ಪ್ರಕರಣ: ಭ್ರೂಣ ಎಸೆದಿದ್ದ ಆಸ್ಪತ್ರೆ ಸೀಜ್ ಮಾಡಿದ ಡಿಎಚ್‌ಒ..!

Last Updated : Jun 25, 2022, 10:40 PM IST

ABOUT THE AUTHOR

...view details