ಕರ್ನಾಟಕ

karnataka

ಆರೋಗ್ಯ ಮೇಲ್ವಿಚಾರಕನ ಮೇಲೆ  ಹಲ್ಲೆ: ಪೇದೆ ವಿರುದ್ಧ ಕ್ರಮಕ್ಕೆ ಆಗ್ರಹ

By

Published : Mar 29, 2020, 10:59 PM IST

ಆರೋಗ್ಯ ಇಲಾಖೆ ಸಿಬ್ಬಂದಿ ಬಸವರಾಜ ಡೊಳ್ಳಿ ಎನ್ನುವವರ ಮೇಲೆ ಪೊಲೀಸ್​ ಪೇದೆಯೊಬ್ಬರು ಹಲ್ಲೆ ಮಾಡಿರುವುದು ಖಂಡನಾರ್ಹ, ಪೇದೆ ವಿರುದ್ದ ಕ್ರಮಕೈಗೊಳ್ಳದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ

action against the cop for who attck the helth officer
ಆರೋಗ್ಯ ಮೇಲ್ವಿಚಾರಕನ ಮೇಲೆ ಪೊಲೀಸ್ ಪೇದೆಯಿಂದ ಹಲ್ಲೆ

ಚಿಕ್ಕೋಡಿ : ಆರೋಗ್ಯ ಇಲಾಖೆ ಸಿಬ್ಬಂದಿ ಬಸವರಾಜ ಡೊಳ್ಳಿ ಎನ್ನುವವರ ಮೇಲೆ ಪೊಲೀಸ್​ ಪೇದೆಯೊಬ್ಬರು ಹಲ್ಲೆ ಮಾಡಿರುವುದು ಖಂಡನಾರ್ಹ ಹಲ್ಲೆ ಮಾಡಿದ ಪೇದೆಯನ್ನ ವಜಾ ಮಾಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ, ಆರೋಗ್ಯ ಇಲಾಖೆ ಸಹಾಯಕ ಹಾಗೂ ಮೇಲ್ವಿಚಾರಕ ಸಂಘಟನೆಯ ರಾಜ್ಯಾಧ್ಯಕ್ಷ ಬಿ. ಎ. ಕುಂಬಾರ ಎಚ್ಚರಿಕೆ ನೀಡಿದ್ದಾರೆ.

ಚಿಕ್ಕೋಡಿ ಪಟ್ಟಣದ ರಾಜ್ಯ ನೌಕರರ ಸಂಘ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳದಿದ್ದರೆ, ಏಪ್ರಿಲ್ 1 ರಿಂದ ರಾಜ್ಯದ 18 ಸಾವಿರ ಮಹಿಳಾ ಹಾಗೂ ಪುರುಷ ಆರೋಗ್ಯ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗೊದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ನಮ್ಮ ಮನೆ ಮಠ ಬಿಟ್ಟು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಪದೇ ಪದೆ ಆರೋಗ್ಯ ಸಿಬ್ಬಂದಿ ಮೇಲೆ ಪೊಲೀಸರು ಹಾಗೂ ಸಾರ್ವಜನಿಕರರಿಂದ ಹಲ್ಲೆ ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details