ಬೆಳಗಾವಿ : ಪ್ರೇಮಕವಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಕಲಹ ವಿಚಾರಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ಶಿವಾನಂದ ವಾಲಿಯ ವಿಚಾರಣೆ ವೇಳೆ ಉತ್ತರ ಕರ್ನಾಟಕದಲ್ಲಿ ಹಲವರಿಗೆ ವಂಚಿಸಿ ಕೋಟ್ಯಂತರ ರೂ.ಆಸ್ತಿ ಸಂಪಾದನೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಶಿವಾನಂದ ವಾಲಿಯನ್ನು ಪೊಲೀಸರು ಸ್ಥಳ ಪರಿಶೀಲನೆಗೆ ಕರೆದೊಯ್ದಿದ್ದಾರೆ.
ಕೆ.ಕಲ್ಯಾಣ್ ಕೌಟುಂಬಿಕ ಕಲಹ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಆರೋಪಿ ಶಿವಾನಂದ ಇನ್ನು ಶಿವಾನಂದ ವಾಲಿ ಜೊತೆ ಮತ್ತೊಬ್ಬ ಆರೋಪಿ ಸೇರಿದ್ದು, ಅವರನ್ನ ಗಂಗಾ ಕುಲಕರ್ಣಿ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿಯೇ ಗಂಗಾ ಅವರನ್ನು ಪೊಲೀಸರು ಹುಡುಕುತ್ತಿದ್ದು, ಅವರ ಫೋನ್ ಸ್ವಿಚ್ಡ್ ಆಫ್ ಆಗಿದೆ.
ಬ್ರಾಹ್ಮಣ ಕುಟುಂಬಗಳನ್ನೇ ಟಾರ್ಗೆಟ್:
ಈ ಹಿಂದೆ ಹಲವು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈ ಇಬ್ಬರು ಆರೋಪಿಗಳು ಬ್ರಾಹ್ಮಣ ಕುಟುಂಬಗಳನ್ನೇ ಟಾರ್ಗೆಟ್ ಮಾಡಿದ್ದರು ಎಂಬ ಶಂಕೆ ವ್ಯಕ್ತವಾಗಿದೆ.
ಇನ್ನು ಗಂಗಾ ಕುಲಕರ್ಣಿ ಕೆ ಕಲ್ಯಾಣ್ ಮನೆಯಲ್ಲಿ ಅಡುಗೆ ಕೆಲಸಕ್ಕೆ ಸೇರಿದ್ದರು. ಇವರು ಮನೆಗೆ ಸೇರಿದ ನಂತರ ಕಲ್ಯಾಣ್ ಕಟುಂಬದಲ್ಲಿ ಬಿರುಕು ಮೂಡಿದೆ. ಅಲ್ಲದೇ ಗಂಗಾ ಮೇಲೆ ಅಪಹರಣ, ಆಸ್ತಿ, ಹಣ ವರ್ಗಾವಣೆ ಆರೋಪ ಕೂಡ ಇದೆ. ಈ ಕುರಿತು ಸೆಪ್ಟೆಂಬರ್ 30ರಂದು ಪ್ರೇಮಕವಿ ಕೆ.ಕಲ್ಯಾಣ ಮಾಳಮಾರುತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತು ಬೆಳಗಾವಿಯ ಮಾಳಮಾರುತಿ ಠಾಣೆಯಲ್ಲಿ ಎಫ್ಐಆರ್ ಸಹ ದಾಖಲಾಗಿದೆ.