ಬೆಳಗಾವಿ: ಒಡಹುಟ್ಟಿದ ತಮ್ಮನನ್ನೇ ಕೊಲೆಗೈದ ಅಣ್ಣನಿಗೆ ಜೀವಾವಧಿ ಶಿಕ್ಷೆ ಹಾಗೂ ಒಂದು ಸಾವಿರ ದಂಡ ವಿಧಿಸಿ ಬೆಳಗಾವಿ 12 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ. ಮೂಡಲಗಿ ತಾಲೂಕಿನ ಬಳೋಬಾಳ ಗ್ರಾಮದ ಭೀಮಪ್ಪ ದುರ್ಗಿ ಶಿಕ್ಷೆಗೊಳಗಾದವ. ಆರೋಪಿ ಭೀಮಪ್ಪ ದುರ್ಗಿ ತನ್ನ ಸಹೋದರ ಬಸವರಾಜ್ ಎಂಬಾತನನ್ನು ಹತ್ಯೆಗೈದಿದ್ದ.
ಬಳೋಬಾಳದ ತೋಟದ ಮನೆಯಲ್ಲಿ ಭೀಮಪ್ಪ ಹಾಗೂ ಬಸವರಾಜ್ ಕುಟುಂಬ ಸಮೇತ ವಾಸವಿದ್ದರು. ಪತ್ನಿ ಭಾಗವ್ವ ಜೊತೆಗೆ ಬಸವರಾಜ್ ಅನೈತಿಕ ಸಂಬಂಧ ಹೊಂದಿದ್ದಾನೆಂದು ಭೀಮಪ್ಪ ಸಂಶಯ ಹೊಂದಿದ್ದ. ಅಲ್ಲದೇ, ಒಂದೇ ಎಕರೆ ಇದ್ದ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೊಡಬೇಕು ಎಂಬ ಈ ಎರಡೂ ಕಾರಣಕ್ಕೆ 2020 ಜೂನ್ 20 ರಂದು ಬಸವರಾಜ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಮಪ್ಪ ಕೊಲೆಗೈದಿದ್ದನು.