ಬೆಳಗಾವಿ: ನಗರದ ಆರ್ಟಿಒ ವೃತ್ತದ ಶ್ರೀ ಸಾಯಿ ಲಾಡ್ಜ್ ರೂಂ ಬಾಯ್ ವಿನಾಯಕ ಕಲಾಲ್ನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಲಾಡ್ಜ್ ರೂಂ ಬಾಯ್ ಕೊಲೆ ಪ್ರಕರಣ: ಪ್ರಮುಖ ಆರೋಪಿಯ ಬಂಧನ - Belagavi latest news
ಬೆಳಗಾವಿ ನಗರದ ಆರ್ಟಿಒ ವೃತ್ತದ ಶ್ರೀ ಸಾಯಿ ಲಾಡ್ಜ್ ರೂಂ ಬಾಯ್ ವಿನಾಯಕ ಕಲಾಲ್ನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಲೆ ಆರೋಪಿ ಶಶಿಕುಮಾರ್
ಕೊಲೆ ಆರೋಪಿ ಶಶಿಕುಮಾರ್ ಉದ್ದಪ್ಪಗೋಳನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶ್ರೀ ಸಾಯಿ ಲಾಡ್ಜ್ನಲ್ಲಿ ಕೆಲಸ ಮಾಡುತ್ತಿದ್ದ ವಿನಾಯಕ ಎಂಬುವರನ್ನು ಕ್ಷುಲ್ಲಕ ಕಾರಣಕ್ಕೆ ಮದ್ಯದ ಬಾಟಲಿಯಿಂದ ಹೊಡೆದು ಅಕ್ಟೋಬರ್ 6ರಂದು ಕೊಲೆ ಮಾಡಲಾಗಿತ್ತು. ಕೊಲೆ ಆರೋಪದಲ್ಲಿ ಅಮಿತ್, ನವೀನ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕೊಲೆಯ ಪ್ರಮುಖ ಆರೋಪಿ ಶಶಿಕುಮಾರ್ ಪರಾರಿಯಾಗಿದ್ದ.
ಈ ಪ್ರಕರಣ ಬೆನ್ನಟ್ಟಿದ್ದ ಪೊಲೀಸರು ಆರೋಪಿ ಶಶಿಕುಮಾರ್ನನ್ನು ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಬಳಿ ಬಂಧಿಸಿದ್ದಾರೆ.