ಅಥಣಿ: ಹಣ ದ್ವಿಗುಣಗೊಳಿಸುವುದಾಗಿ ವಂಚಿಸಿದ್ದ ಆರೋಪಿಯನ್ನು ಬಂಧಿಸುವಲ್ಲಿ ತಾಲೂಕಿನ ಪೊಲೀಸರು ಯಶಸ್ವಿಯಾಗಿದ್ದಾರೆ.
ಅವರಕೋಡ ಗ್ರಾಮದ ಶಂಕರ ಕೋಳಿ ಎಂಬುವರಿಗೆ ಘಟನಟ್ಟಿ ಗ್ರಾಮದ ಮುತ್ತಣ್ಣ ಬಸರಿಕೋಡಿ ಎಂಬ ವ್ಯಕ್ತಿ ಸ್ವಾಮೀಜಿ ಗಾಳಿಯಲ್ಲಿ ಕೈ ಬೀಸುವಾಗ ಎರಡುಸಾವಿರ ಮುಖಬೆಲೆಯ ನೋಟುಗಳು ಮೇಲಿನಿಂದ ಬೀಳುವ ದೃಶ್ಯ ಇರುವ ವಿಡಿಯೋ ಮೊಬೈಲಿಗೆ ಕಳಿಸಿ ಒಂದು ಲಕ್ಷ ರೂಪಾಯಿ ಕೊಟ್ಟರೆ ಐದು ಲಕ್ಷ ರೂಪಾಯಿ ಕೊಡುವುದಾಗಿ ಹೇಳಿ ಶಂಕರ ಕೋಳಿ ಅವರಿಂದ 20,000 ಹಣ ಪಡೆದು ಹಣ ಮರಳಿಸದೆ ಪರಾರಿಯಾಗಿದ್ದ ಎನ್ನಲಾಗ್ತಿದೆ. ಹಣ ದ್ವಿಗುಣ ಹೆಸರಲ್ಲಿ ವಂಚನೆಗೆ ಒಳಗಾಗಿದ್ದನ್ನು ತಿಳಿದ ಶಂಕರ ಅಥಣಿ ಪೊಲೀಸ್ ಠಾಣೆಯಲ್ಲಿ ಡಿ. 4ರಂದು ರಂದು ದೂರು ನೀಡಿದ್ದರು.
ಇದನ್ನೂ ಓದಿ:ಊಟ ಕೊಡಿಸ್ತೀನೆಂದು ಆಕೆಯನ್ನೇ ತಿಂದುಂಡರು.. ಜಿಲ್ಲಾಸ್ಪತ್ರೆ ಕಾಮುಕ ಮತ್ತವನ ಗ್ಯಾಂಗ್‌ನ ರಾಕ್ಷಸಿ ಕೃತ್ಯ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅಥಣಿ ಪಿಎಸ್ಐ ಕುಮಾರ ಹಾಡಕಾರ ಅವರು ಐಪಿಸಿ 420, 504, 506 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಮುತ್ತಣ್ಣ ಬಸರಿಕೋಡಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯ ಪತ್ತೆಗಾಗಿ ಬೆಳಗಾವಿ ಪೊಲೀಸ್ ಅಧೀಕ್ಷಕರು ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಅಮರನಾಥ ರೆಡ್ಡಿ, ಅಥಣಿ ಡಿಎಸ್ಪಿ ಎಸ್.ವಿ ಗಿರೀಶ್ ಮತ್ತು ಸಿಪಿಐ ಶಂಕರಗೌಡ ಬಸನಗೌಡರ ಅವರ ಮಾರ್ಗದರ್ಶನದ ಮೇರೆಗೆ ಪಿಎಸ್ ಐ ಕುಮಾರ ಹಾಡಕಾರ ಮತ್ತು ಸಿಬ್ಬಂದಿಗಳಾದ ಎಸ್ಜಿಜಿ ಮನ್ನಾಪೂರ, ಆರ್ ಸಿ ಹಾದಿಮನಿ, ಕೆ ಬಿ ಸಿರಗೂರ ಇವರ ತಂಡ ರಚಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.