ಚಿಕ್ಕೋಡಿ:ಪಟ್ಟಣದ ಪುರಸಭೆ ಮುಂಭಾಗದಲ್ಲಿರುವ ಝೆರಾಕ್ಸ್ ಹಾಗೂ ಸ್ಟೇಷನರಿ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.
ಚಿಕ್ಕೋಡಿ: ಝೆರಾಕ್ಸ್, ಸ್ಟೇಷನರಿ ಅಂಗಡಿಗೆ ಆಕಸ್ಮಿಕ ಬೆಂಕಿಗಾಹುತಿ! - ಚಿಕ್ಕೋಡಿಯಲ್ಲಿ ಆಕಸ್ಮಿಕ ಬೆಂಕಿ
ಚಿಕ್ಕೋಡಿ ಪಟ್ಟಣದ ಜಯಶ್ರೀ ಕೋಗೆ ಎಂಬ ಮಹಿಳೆಗೆ ಸೇರಿದ ಅಂಗಡಿ ಇದಾಗಿದೆ. ತಾಯಿ ಮತ್ತು ಮಗಳಿಗೆ ಈ ಅಂಗಡಿ ಆಸರೆಯಾಗಿತ್ತು. ಆದರೆ, ನಿನ್ನೆ ರಾತ್ರಿ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ವಸ್ತುಗಳೆಲ್ಲ ಸುಟ್ಟಿವೆ.
ಆಕಸ್ಮಿಕ ಬೆಂಕಿ
ಚಿಕ್ಕೋಡಿ ಪಟ್ಟಣದ ಜಯಶ್ರೀ ಕೋಗೆ ಎಂಬ ಮಹಿಳೆಗೆ ಸೇರಿದ ಅಂಗಡಿ ಇದಾಗಿದೆ. ತಾಯಿ ಮತ್ತು ಮಗಳಿಗೆ ಈ ಅಂಗಡಿ ಆಸರೆಯಾಗಿತ್ತು. ಆದರೆ, ನಿನ್ನೆ ರಾತ್ರಿ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ವಸ್ತುಗಳೆಲ್ಲ ಸುಟ್ಟುಹೋಗಿವೆ.
ಅವಘಡದಲ್ಲಿ ಯಾವುದೇ ಜೀವಕ್ಕೆ ಅಪಾಯವಾಗಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ. ಚಿಕ್ಕೋಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.