ಕರ್ನಾಟಕ

karnataka

ಬೈಕ್​ಗೆ ಟಿಪ್ಪರ್ ಡಿಕ್ಕಿ: ತಂದೆ - ಮಗಳು ಸ್ಥಳದಲ್ಲೇ ಸಾವು, ತಾಯಿ ಸ್ಥಿತಿ ಗಂಭೀರ

By

Published : Apr 9, 2021, 9:46 PM IST

ಬೈಕ್‍ಗೆ ಹಿಂದಿನಿಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ತಂದೆ-ಮಗಳು ಮೃತಪಟ್ಟು,ತಾಯಿ ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಬೆಳಗಾವಿಯಲ್ಲಿ ಜಿಲ್ಲೆಯಲ್ಲಿ ನಡೆದಿದೆ.

Accident in Belgaum
ಬೆಳಗಾವಿಯಲ್ಲಿ ಅಪಘಾತ

ಬೆಳಗಾವಿ: ಬೈಕ್‍ಗೆ ಹಿಂದಿನಿಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ತಂದೆ - ಮಗಳು ಸಾವನ್ನಪ್ಪಿದ್ದು, ತಾಯಿ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಕಿತ್ತೂರು ತಾಲೂಕಿನ ಇಟಗಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ-4ರಲ್ಲಿ‌ ನಡೆದಿದೆ.

ಬೆಳಗಾವಿಯಲ್ಲಿ ಅಪಘಾತ

ಖಾನಾಪುರ ತಾಲೂಕಿನ ಪಾರಿಶ್ವಾಡ ಗ್ರಾಮದ ಮಡಿವಾಳಯ್ಯ ಮಲ್ಲಯ್ಯ ಕಲ್ಮಠ(38), ತನುಶ್ರೀ ಮಡಿವಾಳಯ್ಯ ಕಲ್ಮಠ(3) ಎಂದು ಗುರುತಿಸಲಾಗಿದೆ. ಭಾಗ್ಯಶ್ರೀ ಮಹೇಶ ಕಲ್ಮಠ(28) ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಕಿತ್ತೂರು ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details