ಬೆಳಗಾವಿ:ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ಸರ್ಕಾರಿ ನಿವಾಸ ಎದುರಿನ ಹೈ ವೋಲ್ಟೇಜ್ ವಿದ್ಯುತ್ ಕಂಬಕ್ಕೆ ಹಾಲು ಸಾಗಾಟ ಮಾಡುತ್ತಿದ್ದ ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಮಂಜು ಮುಸುಕಿದ ವಾತಾವರಣ ಹಿನ್ನಲೆ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ವಿಶ್ವೇಶ್ವರಯ್ಯ ನಗರದಲ್ಲಿ ನೂರಾರು ಜನ ಹಿರಿಯ ನಾಗರಿಕರು ವಾಯು ವಿಹಾರ ಮಾಡುತ್ತಿದ್ದರು ಸದ್ಯ ಈ ದುರಂತದಿಂದ ಬಾರಿ ಪ್ರಮಾಣದ ಅಪಾಯ ತಪ್ಪಿದಂತಾಗಿದೆ. ಸದ್ಯ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಅಥಣಿಯಲ್ಲಿ ಟ್ರಾಕ್ಟರ್ಗೆ ವಾರದ ಸಂತೆಯ ಗೂಡ್ಸ್ ವಾಹನ ಡಿಕ್ಕಿ ಚಾಲಕ ಸ್ಥಳದಲ್ಲೇ ಸಾವು:ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಕಟನೂರ ಗ್ರಾಮದ ಹೊರವಲಯದಲ್ಲಿ ಗೂಡ್ಸ್ ವಾಹನ ಹಾಗೂ ಟ್ರಾಕ್ಟರ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಗೂಡ್ಸ್ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ. ಟ್ಯಾಕ್ಟರ್ ಮತ್ತು ಪಿಕ್ ಅಪ್ ವಾಹನ ಅಥಣಿ-ಸಾವಳಗಿ ರಸ್ತೆಯಲ್ಲಿ ಸಾಗಿ ಬರುತ್ತಿದ್ದಾಗ ಒಂದಕ್ಕೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಓರ್ವ ಮೃತಪಟ್ಟದಲ್ಲದೆ ಏಳು ಜನರು ಗಂಭೀರ ಗಾಯಗೊಂಡಿದ್ದಾರೆ.
ಇದನ್ನೂ ಓದಿ:ಮನೆಯಲ್ಲಿ ಭೀಕರ ಸ್ಫೋಟ: ನಾಲ್ವರ ಸಾವು, 2 ಕಿಮೀವರೆಗೂ ಕೇಳಿಸಿದ ಸ್ಫೋಟದ ಸದ್ದು