ಅಥಣಿ:ಪಾದಚಾರಿಯನ್ನು ರಕ್ಷಿಸಲು ಹೋಗಿ ಬುಲೆರೋ ಪಿಕ್ಅಪ್ ವಾಹನ ಪಲ್ಟಿಯಾಗಿದ್ದು, ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಮಸರಗುಪ್ಪಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಅಥಣಿಯಲ್ಲಿ ಭೀಕರ ಅಪಘಾತ: ಮಕ್ಕಳಿಬ್ಬರ ಸಾವು, 6 ಮಂದಿಯ ಸ್ಥಿತಿ ಚಿಂತಾಜನಕ - athani belagavi latest news
ಪಾದಚಾರಿಯನ್ನು ರಕ್ಷಿಸಲು ಹೋಗಿ ಬುಲೆರೋ ಪಿಕ್ಅಪ್ ವಾಹನ ಪಲ್ಟಿಯಾಗಿದ್ದು, ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಮಸರಗುಪ್ಪಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಅಥಣಿಯಲ್ಲಿ ವಾಹನ ಅಪಘಾತ : 2 ಮಕ್ಕಳು ಸಾವು, 6 ಮಂದಿಯ ಸ್ಥಿತಿ ಚಿಂತಾಜನಕ!
ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಬುಲೆರೋ ಪಿಕ್ಅಪ್ ವಾಹನದಲ್ಲಿ 35ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದರಂತೆ. ಅಥಣಿ ತಾಲೂಕಿನ ಮಸರಗುಪ್ಪಿ ಗ್ರಾಮದಿಂದ ಖೆಳೆಗಾಂವ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಇನ್ನೂ 6 ಜನರ ಸ್ಥಿತಿ ಚಿಂತಾಜನಕವಾಗಿದ್ದು, ಮಹಾರಾಷ್ಟ್ರದ ಮೀರಜ್ ಆಸ್ಪತ್ರೆಗೆ ದಾಖಲಿಸಲಾಗಿದೆ.