ಬೆಳಗಾವಿ: ಪಹಣಿಯಲ್ಲಿ ವಾರಸುದಾರರ ಹೆಸರು ಸೇರಿಸಲು ಮಾಲೀಕನಿಂದ ಹಣ ಪಡೆಯುತ್ತಿದ್ದ ಪಿಡಿಒ ರೆಡ್ ಹ್ಯಾಂಡ್ ಆಗಿ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
5 ಸಾವಿರ ರೂ. ಲಂಚಕ್ಕೆ ಬೇಡಿಕೆ: ಬೆಳಗಾವಿಯಲ್ಲಿ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದ ಪಿಡಿಒ - Acceptance of bribes
ಪಹಣಿಯಲ್ಲಿ ವಾರಸುದಾರರ ಹೆಸರನ್ನು ಸೇರ್ಪಡೆ ಮಾಡಲು ಮಾಲೀಕನಿಂದ ಹಣ ಪಡೆಯುತ್ತಿದ್ದ ಪಿಡಿಒ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ACB Arrested PDO at Belgum
ತಾಲೂಕಿನ ಕಾಲಕಾಂಬ ಗ್ರಾ.ಪಂ. ಪಿಡಿಒ ಶ್ರೀಶೈಲ ನಾಗಠಾಣ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಕಾಲಕಾಂಬ ರೋಹನ್ ಪಾಟೀಲ ಎಂಬುವವರು ಪಹಣಿಯಲ್ಲಿ ವಾರಸುದಾರರ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದರು.
ಆಗ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀಶೈಲ ನಾಗಠಾಣ ಪಹಣಿಯಲ್ಲಿ ಹೆಸರು ಸೇರಿಸಲು ರೋಹನ್ ಬಳಿ 5 ಸಾವಿರ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ರೋಹನ್ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇಂದು ರೋಹನ್ ಬಳಿ ಪಿಡಿಒ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ.