ಕರ್ನಾಟಕ

karnataka

ETV Bharat / state

ಶಶಿಕಲಾಗೆ ರಾಜಾತಿಥ್ಯ ನೀಡಿದ ಆರೋಪ: ಹಿಂಡಲಗಾ ಜೈಲು ಅಧೀಕ್ಷಕನ ಮನೆ ಮೇಲೆ ಎಸಿಬಿ ದಾಳಿ - acb raids in belgavi,

ಶಶಿಕಲಾ ನಟರಾಜನ್ ಅವರಿಗೆ ರಾಜಾತಿಥ್ಯ ನೀಡಿದ್ದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಹಿಂಡಲಗಾ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ACB raids on Belgaum Hindalga jail superintendent house
ಹಿಂಡಲಗಾ ಜೈಲಿನ ಅಧೀಕ್ಷಕನ ಮನೆ ಮೇಲೆ ಎಸಿಬಿ ದಾಳಿ

By

Published : Aug 11, 2021, 3:44 PM IST

Updated : Aug 11, 2021, 4:33 PM IST

ಬೆಳಗಾವಿ:ಶಶಿಕಲಾ ನಟರಾಜನ್ ಅವರಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಹಿಂಡಲಗಾ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.

ಹಿಂಡಲಗಾ ಜೈಲು ಅಧೀಕ್ಷಕನ ಮನೆ ಮೇಲೆ ಎಸಿಬಿ ದಾಳಿ

ಬೆಳಗಾವಿ ಹೊರವಲಯದ ಹಿಂಡಲಗಾ ಜೈಲಿನ ಪಕ್ಕದಲ್ಲಿರುವ ಸರ್ಕಾರಿ ನಿವಾಸದ ಮೇಲೆ ಬೆಂಗಳೂರಿನ ಐವರು ಎಸಿಬಿ ಅಧಿಕಾರಿಗಳ ತಂಡ ಇಂದು ಬೆಳಗ್ಗೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅವರಿಗೆ ಸ್ಥಳೀಯ ಎಸಿಬಿ ಅಧಿಕಾರಿಗಳು ಸಾಥ್ ನೀಡಿದ್ದಾರೆ.

ಓದಿ: ವಿನಯ್‌ ಕುಲಕರ್ಣಿಗೆ ಜಾಮೀನು‌ ಸಿಕ್ಕರೂ ಸದ್ಯಕ್ಕಿಲ್ಲ ರಿಲೀಫ್ : ಮನೆಯತ್ತ ಕಾರ್ಯಕರ್ತರ ದೌಡು

ಕೃಷ್ಣಕುಮಾರ್ ಈ ಹಿಂದೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಅಧೀಕ್ಷಕರಾಗಿದ್ದರು. ಆಗ ಶಶಿಕಲಾ ನಟರಾಜನ್ ಅವರಿಗೆ ರಾಜಾತಿಥ್ಯ ನೀಡಿದ್ದ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಎಸಿಬಿಯಲ್ಲಿ ಕೃಷ್ಣಕುಮಾರ್ ವಿರುದ್ಧ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಬೆಳಗಾವಿಗೆ ಆಗಮಿಸಿದ ಎಸಿಬಿ ಅಧಿಕಾರಿಗಳು ಅಧೀಕ್ಷಕನ ಮನೆ ಮೇಲೆ ದಾಳಿ ನಡೆಸಿ ಪರಿಶೀಲಿಸಿದರು.

Last Updated : Aug 11, 2021, 4:33 PM IST

ABOUT THE AUTHOR

...view details