ಕರ್ನಾಟಕ

karnataka

ETV Bharat / state

ಬೆಳಗಾವಿ: ಸ್ಮಾರ್ಟ್​​ ಸಿಟಿ ಮುಖ್ಯ ಇಂಜಿನಿಯರ್ ಎಸಿಬಿ ಬಲೆಗೆ... 23.50 ಲಕ್ಷ ರೂ. ನಗದು ಪತ್ತೆ - ಎಸಿಬಿ ದಾಳಿ

ಸ್ಮಾರ್ಟ್ ‌ಸಿಟಿ ಯೋಜನೆಯಡಿ ಕೈಗೊಳ್ಳಲಾದ ಬೆಳಗಾವಿ ಸಿಟಿ ಬಸ್ ನಿಲ್ದಾಣದ ಕಾಮಗಾರಿ ಬಿಲ್ ಮಂಜೂರು ಮಾಡಿಸಲು ಶೇ. 5ರಷ್ಟು ಅಂದರೆ 60 ಸಾವಿರ ಲಂಚಕ್ಕೆ ಸಿದ್ದನಾಯ್ಕ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಕುರಿತು ಅಪೂರ್ವ ಕನ್ಸಟ್ರಕ್ಷನ್ ಪ್ರಾಜೆಕ್ಟ್ ಮ್ಯಾನೇಜರ್ ‌ಸಂಜೀವ್ ಕುಮಾರ್ ನವಲಗುಂದ ‌ಎಸಿಬಿಗೆ ದೂರು ನೀಡಿದ್ದರು.

acb-raided-smart-city-chief-engineer-in-belagavi
ಸ್ಮಾರ್ಟ್​​ಸಿಟಿ ಮುಖ್ಯ ಇಂಜಿನಿಯರ್ ಎಸಿಬಿ ಬಲೆಗೆ

By

Published : Mar 18, 2021, 9:53 PM IST

ಬೆಳಗಾವಿ:ಕೇಂದ್ರ ಸರ್ಕಾರದ ‌ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆಯ ಬೆಳಗಾವಿ ಮುಖ್ಯ ಇಂಜಿನಿಯರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಬೆಳಗಾವಿ ‌ಸ್ಮಾರ್ಟ್ ಸಿಟಿ ಜನರಲ್ ಮ್ಯಾನೇಜರ್ ಸಿದ್ದನಾಯ್ಕ ದೂಡಬಸಪ್ಪ ನಾಯ್ಕರ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿ.

ಸ್ಮಾರ್ಟ್ ‌ಸಿಟಿ ಯೋಜನೆಯಡಿ ಕೈಗೊಳ್ಳಲಾದ ಬೆಳಗಾವಿ ಸಿಟಿ ಬಸ್ ನಿಲ್ದಾಣದ ಕಾಮಗಾರಿ ಬಿಲ್ ಮಂಜೂರು ಮಾಡಿಸಲು ಶೇ. 5ರಷ್ಟು ಅಂದರೆ 60 ಸಾವಿರ ಲಂಚಕ್ಕೆ ಸಿದ್ದನಾಯ್ಕ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಕುರಿತು ಅಪೂರ್ವ ಕನ್ಸಟ್ರಕ್ಷನ್ ಪ್ರಾಜೆಕ್ಟ್ ಮ್ಯಾನೇಜರ್ ‌ಸಂಜೀವ್ ಕುಮಾರ್ ನವಲಗುಂದ ‌ಎಸಿಬಿಗೆ ದೂರು ನೀಡಿದ್ದರು.

ಇಂದು ಸಿದ್ದನಾಯ್ಕ್ ತಮ್ಮ ಮನೆಯಲ್ಲಿ ಸಂಜೀವಕುಮಾರ್ ಅವರಿಂದ ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಬಳಿಕ ಎಸಿಬಿ ಅಧಿಕಾರಿಗಳು ಆರೋಪಿ ಸಿದ್ದನಾಯ್ಕ್ ಮನೆಯಲ್ಲಿ ತಪಾಸಣೆ ನಡೆಸಿದಾಗ ‌23,56,000 ರೂ. ನಗದು ಪತ್ತೆಯಾಗಿದೆ.

ಆರೋಪಿತ ಅಧಿಕಾರಿಯನ್ನು ವಶಕ್ಕೆ ಪಡೆದಿರುವ ಎಸಿಬಿ ಅಧಿಕಾರಿಗಳು, ತನಿಖೆ ಮುಂದುವರೆಸಿದ್ದಾರೆ. ಉತ್ತರ ವಲಯ ಎಸಿಬಿ ಪೊಲೀಸ್ ಅಧೀಕ್ಷಕ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ಉಪಾಧಿಕ್ಷಕ ಜೆ.ಎಂ.ಕರುಣಾಕರ ಶೆಟ್ಟಿ, ಪಿಐ ಎ.ಎಸ್.ಗುದಿಗೊಪ್ಪ, ಹೆಚ್.ಹೆಚ್.ಸುನೀಲ್‍ಕುಮಾರ ನೇತೃತ್ವದ ತಂಡ ದಾಳಿ ನಡೆಸಿದೆ.

ಇದನ್ನೂ ಓದಿ:ಹೆಚ್ಚು ಶ್ರಮ, ಕಡಿಮೆ ಲಾಭ: ಇದು ಕೊಲ್ಲಾಪುರ ಚಪ್ಪಲಿ ತಯಾರಕರ ಪಾಡು

ABOUT THE AUTHOR

...view details