ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯ ಮೂವರು ಅಧಿಕಾರಿಗಳ ಮನೆ-ಕಚೇರಿ ಮೇಲೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ಕೆಜಿಗಟ್ಟಲೇ ಚಿನ್ನಾಭರಣ, ಕಂತೆ ಕಂತೆ ಲಕ್ಷಾಂತರ ಹಣ ಕಂಡು ದಂಗಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿರುವ ಮೋಟಾರ್ ವೈಹಿಕಲ್ ಇನ್ಸ್ಪೆಕ್ಟರ್ ಸದಾಶಿವ ಮರಲಿಂಗಣ್ಣವರ್,ಬೈಲಹೊಂಗಲ ಪಟ್ಟಣದಲ್ಲಿರುವ ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿ ಅಡಿವಿಸಿದ್ದೇಶ್ವರ ಮಾಸ್ತಿ ಹಾಗೂ ಬೆಳಗಾವಿ ವೈಭವ ನಗರದಲ್ಲಿರುವ ಹೆಸ್ಕಾಂ ಲೈನ್ ಮೆಕ್ಯಾನಿಕ್ ನಾತಾಜಿ ಪಾಟೀಲ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಆರ್‌ಟಿಒ ಇನ್ಸ್ಪೆಕ್ಟರ್ ಸದಾಶಿವ ಮನೆಯಲ್ಲಿ 1ಕೆಜಿ 135ಗ್ರಾಂ ಚಿನ್ನಾಭರಣ, 8 ಲಕ್ಷ 22ಸಾವಿರ ನಗದು, ಬೆಳ್ಳಿ ಪಾತ್ರೆಗಳು ಪತ್ತೆಯಾಗಿವೆ ಎಂದು ಎಸಿಬಿ ಮೂಲಗಳು ತಿಳಿಸಿವೆ.