ಬೆಳಗಾವಿ: ಕಾನೂನು ಪರೀಕ್ಷೆಗಳ ಸಮಯದ ಅನಿಶ್ಚಿತತೆ ಹಾಗೂ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟುಮಾಡುವ ನಿಯಮಗಳನ್ನು ಸರಿಪಡಿಸುವಂತೆ, ಎಲ್ಲಾ ಕಾನೂನು ಕಾಲೇಜುಗಳಿಗೆ ಸರಿಯಾದ ಮಾರ್ಗಸೂಚಿಗಳನ್ನು ನೀಡುವಂತೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಎಬಿವಿಪಿ ಸದಸ್ಯರು, ವಿಶ್ವವಿದ್ಯಾನಿಲಯವು ಪ್ರಸ್ತುತ ನೀಡಿರುವ ಮಾರ್ಗಸೂಚಿಗಳನ್ನು ನೋಡಿದರೆ, ಕಾನೂನು ವಿದ್ಯಾರ್ಥಿಗಳು ಸಂಪೂರ್ಣವಾಗಿ ಗೊಂದಲಕ್ಕೊಳಗಾಗಿದ್ದಾರೆ. ಸಮಯವಿಲ್ಲದೆ ಎರಡು ಸೆಮಿಸ್ಟರ್ ಪರೀಕ್ಷೆಗಳ ದಿನಗಳು ಮತ್ತು ನಡವಳಿಕೆಗಳ ಬಗ್ಗೆ ಚಿಂತಿತರಾಗಿದ್ದಾರೆ. ಮಾದರಿಯ ಪರೀಕ್ಷೆಯ ಬಗ್ಗೆ ಸರಿಯಾದ ಮಾರ್ಗಸೂಚಿಗಳಿಲ್ಲ ಎಂದು ಮನವಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.