ಚಿಕ್ಕೋಡಿ: ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನ ಭಾರತಕ್ಕೆ ಹಸ್ತಾಂತರಿಸಿದ್ದು, ಈ ಹಿನ್ನೆಲೆಯಲ್ಲಿ ಅಥಣಿ ತಾಲೂಕಿನ ಮೋಳೆ ಗ್ರಾಮದ ಯುವಕರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಅಭಿನಂದನ್ ಭಾರತಕ್ಕೆ ಹಸ್ತಾಂತರ: ಚಿಕ್ಕೋಡಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ - ಭಾರತಕ್ಕೆ ಹಸ್ತಾಂತರ
ಪಾಕ್ಗೆ ಸಿಂಹಸ್ವಪ್ನರಾದ ಅಭಿನಂದನ್ರನ್ನು ಭಾರತಕ್ಕೆ ಮರಳಿಸಿದ್ದು ನಮ್ಮಗೆಲ್ಲಾ ಸಂತೋಷ ತಂದಿದೆ ಎಂದು ಹೇಳಿ ಡ್ಯಾನ್ಸ್ ಮೂಲಕ ಅಥಣಿಯ ಮೋಳೆ ಗ್ರಾಮದ ಯುವಕರು ತಮ್ಮ ಸಂತೋಷವನ್ನು ಹೊರ ಹಾಕಿದರು.
ಅಭಿನಂದನ್ ಅವರನ್ನು ಪಾಕಿಸ್ತಾನದಿಂದ ವಾಹನದಲ್ಲಿ ಕರೆತರುವ ವೇಳೆ ಅವರ ಕಣ್ಣಿಗೆ ಬಟ್ಟೆ ಕಟ್ಟಿ, ಕ್ರೂರ ರೀತಿಯಲ್ಲಿ ಕರೆತರಲಾಗಿದೆ. ಈಗಾಗಲೇ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರಿಂದ ಬೇಸರವಾಗಿದೆ. ಪಾಕ್ಗೆ ಸಿಂಹಸ್ವಪ್ನರಾದ ಅಭಿನಂದನ್ರನ್ನು ಭಾರತಕ್ಕೆ ಮರಳಿಸಿದ್ದು ನಮ್ಮಗೆಲ್ಲಾ ಸಂತೋಷ ತಂದಿದೆ ಎಂದು ಹೇಳಿ ಡ್ಯಾನ್ಸ್ ಮೂಲಕ ಮೋಳೆ ಗ್ರಾಮದ ಯುವಕರು ತಮ್ಮ ಸಂತೋಷವನ್ನು ಹೊರ ಹಾಕಿದರು.
ಈ ಪಾಪಿ ಪಾಕಿಸ್ತಾನಕ್ಕೆ ನಮ್ಮ ಕೇಂದ್ರ ಸರಕಾರ ತಕ್ಕ ಪಾಠ ಕಲಿಸಿದೆ. ಇನ್ನು ಮುಂದೆಯಾದರೂ ಪಾಕಿಸ್ತಾನ ತನ್ನ ಚಾಳಿ ಬಿಟ್ಟು ಸುಮ್ಮನಿರಬೇಕು. ಒಂದು ವೇಳೆ ಯುದ್ಧ ಘೋಷಣೆಯಾದರೆ, ಮೋಳೆ ಗ್ರಾಮದ ನೂರಾರು ಯುವಕರು ದೇಶಕ್ಕಾಗಿ ಪ್ರಾಣ ಕೊಡಲು ಸದಾ ಸಿದ್ಧರಿದ್ದೇವೆ. ನಮಗೆ ಮೊದಲು ದೇಶ ಮುಖ್ಯ ಎಂದು ದೇಶದ ಪರ ಜೈಕಾರಗಳನ್ನು ಹೇಳುತ್ತಾ ಸಂಭ್ರಮಿಸಿದರು.