ಕರ್ನಾಟಕ

karnataka

By

Published : Jun 18, 2022, 11:00 PM IST

ETV Bharat / state

ಪ್ರಕಾಶ ಹುಕ್ಕೇರಿ ತಮ್ಮ ಕ್ವಾಲಿಫಿಕೇಶನ್ ಬಗ್ಗೆ ಜನತೆಗೆ ಹೇಳಲಿ : ಭಾಸ್ಕರ್ ರಾವ್

ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷವನ್ನು ಬಲ ಪಡಿಸಲು ಶ್ರಮಿಸುತ್ತಿದ್ದೇವೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಕ್ಕೆ ಜನರು ಪದೇ ಪದೇ ಅವಕಾಶ ಕೊಟ್ಟರೂ ಪ್ರಯೋಜನವಾಗಿಲ್ಲ. ಈ ಮೂರು ಪಕ್ಷಗಳು ಕೊಟ್ಟ ಪ್ರಣಾಳಿಕೆಯನ್ನು ಈಡೇರಿಸುವುದಿಲ್ಲ ಎಂದು ಆಪ್ ಮುಖಂಡ ಭಾಸ್ಕರ್ ರಾವ್ ಹೇಳಿದ್ದಾರೆ.

aap-leader-bhaskar-rao-statement
ಪ್ರಕಾಶ ಹುಕ್ಕೇರಿ ತಮ್ಮ ಕ್ವಾಲಿಫಿಕೇಶನ್ ಬಗ್ಗೆ ಜನತೆಗೆ ಹೇಳಲಿ : ಆಪ್ ಮುಖಂಡ ಭಾಸ್ಕರ್ ರಾವ್

ಬೆಳಗಾವಿ : ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ ಪ್ರಕಾಶ ಹುಕ್ಕೇರಿ ಏನು ಶಿಕ್ಷಕರಾ..? ಅವರ ಏಜುಕೇಶನ್, ಕ್ವಾಲಿಫಿಕೇಶನ್ ಬಗ್ಗೆ ಜನತೆ ಮುಂದೆ ಅವರೇ ಹೇಳಬೇಕು ಎಂದು ಆಮ್ಆದ್ಮಿ ಪಕ್ಷದ ಮುಖಂಡ ಭಾಸ್ಕರ್ ರಾವ್ ಆಗ್ರಹಿಸಿದ್ದಾರೆ. ನಗರದಲ್ಲಿ ಶನಿವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜಸ್ಥಾನದಲ್ಲಿ ಕಾಂಗ್ರೆಸ್ ನವರು ಕಾರ್ಯಕ್ರಮ ಮಾಡಿ ಸಂಬಂಧಿಕರಿಗೆ, ಒಂದೇ ಕುಟುಂಬಕ್ಕೆ ಟಿಕೆಟ್ ಕೊಡಬಾರದು ಅಂತಾ ಹೇಳಿ ಒಂದು ತಿಂಗಳು ಕೂಡ ಆಗಿಲ್ಲ. ತಂದೆ ಮಗ ಒಂದೇ ಪಕ್ಷಕ್ಕೆ ಸೇರಿದವರಾಗಿದ್ದು, ಇದೀಗ ಇಬ್ಬರು ವಿಧಾನಸೌಧದ ಮೆಟ್ಟಿಲು ಹತ್ತಿದ್ದಾರೆ ಎಂದು ಟೀಕಿಸಿದರು.

ಪ್ರಕಾಶ ಹುಕ್ಕೇರಿ ತಮ್ಮ ಕ್ವಾಲಿಫಿಕೇಶನ್ ಬಗ್ಗೆ ಜನತೆಗೆ ಹೇಳಲಿ ಎಂದು ಆಪ್ ಮುಖಂಡ ಭಾಸ್ಕರ್ ರಾವ್ ಸವಾಲೆಸೆದಿದ್ದಾರೆ.

ಜನಸಾಮಾನ್ಯರನ್ನ ಮೂರ್ಖರನ್ನಾಗಿ ಮಾಡಿ ಎಲ್ಲ ಆಡಳಿತ, ಅಧಿಕಾರ ಒಂದೇ ಕುಟುಂಬಕ್ಕೆ ಎಂಬಂತೆ ರಾಜಕಾರಣ ಈಗಲೂ ಮುಂದುವರಿಯುತ್ತಿದೆ. ಗೆದ್ದ ಬಳಿಕ ಪೊಲೀಸ್ ಅಧಿಕಾರಿಗಳಿಗೆ ನಿನ್ನ ಹಲ್ಲು ಉದುರಿಸಿ ಬಿಡುತ್ತೇನೆ ಎಂದು ಹೇಳುವುದು ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ ಹಿರಿಯ ನಾಯಕ ಮಾತನಾಡುವ ಪದಗಳಾ...! ಎಂದು ಪ್ರಕಾಶ ಹುಕ್ಕೇರಿ ವಿರುದ್ಧ ಬಾಸ್ಕರ್​ ರಾವ್ ಪ್ರಶ್ನಿಸಿದರು.

ಬಿಜೆಪಿಯ ಸತತ ಸೋಲಿಗೆ ಒಳಜಗಳವೇ ಕಾರಣ : ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಇದ್ದರೂ ಕೂಡ ಸತತವಾಗಿ ಎಂಎಲ್‍ಸಿ ಚುನಾವಣೆಗಳಲ್ಲಿ ಬಿಜೆಪಿ ಸೋಲುತ್ತಿದೆ. ಇದಕ್ಕೆಲ್ಲ ಅವರ ಒಳಜಗಳವೇ ಕಾರಣವಾಗಿದೆ. ಈ ಒಳಜಗಳ ಯಾವುದೇ ಜನರ ಹಾಗೂ ನಾಡಿನ ಅಭಿವೃದ್ಧಿ ಸಂಬಂಧಕ್ಕಾಗಿ ಅಲ್ಲ. ಅವನು ಮುಂದೆ ಬರುತ್ತಾನೆ. ಇವನು ಮುಂದೆ ಬರುತ್ತಾನೆ ಎನ್ನುವ ಸ್ವಾರ್ಥಕ್ಕೋಸ್ಕರ ಬಿಜೆಪಿ ಸೋಲುತ್ತಿದೆ‌. ಪ್ರಣಾಳಿಕೆಯಲ್ಲಿ ಬಹಳ ದೊಡ್ಡದಾಗಿ ಮಾತನಾಡುತ್ತಾರೆ. ಆದರೆ, ಯಾವ ಭರವಸೆಗಳನ್ನು ಈಡೇರಿಸಲು ಇವರಿಂದ ಆಗುತ್ತಿಲ್ಲ ಎಂದು ವಾಗ್ದಾಳಿ‌ ನಡೆಸಿದರು.

ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಬಲಪಡಿಸಲು ಶ್ರಮ :ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಬಲ ಪಡಿಸಲು ಶ್ರಮಿಸುತ್ತಿದ್ದೇವೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಕ್ಕೆ ಜನರು ಪದೇ ಪದೇ ಅವಕಾಶ ಕೊಟ್ಟರೂ ಪ್ರಯೋಜನವಾಗಿಲ್ಲ. ಈ ಮೂರು ಪಕ್ಷದಲ್ಲಿ ಭ್ರಷ್ಟಾಚಾರ, ಕೊಟ್ಟ ಪ್ರಣಾಳಿಕೆಯನ್ನು ಈಡೇರಿಸುವುದಿಲ್ಲ. ಈ ಮೂರು ಪಕ್ಷಗಳಲ್ಲಿ ಪ್ರಾಮಾಣಿಕ ನಾಯಕರು ಯಾರಾದರೂ ಇದ್ದಾರಾ....? ಪಂಜಾಬ್‍ನಲ್ಲಿ ಭ್ರಷ್ಟಾಚಾರವೆಸಗಿದ ಆಮ್ ಆದ್ಮಿ ಮಂತ್ರಿಯನ್ನೇ ಕಿತ್ತು ಹಾಕಿ, ಕ್ರಿಮಿನಲ್ ಕೇಸ್ ಹಾಕಿದ್ದೇವೆ. ಆಪ್ ಬರೀ ನಗರ ಪ್ರದೇಶಕ್ಕೆ ಸಿಮೀತವಾಗಿಲ್ಲ. ಹಳ್ಳಿ-ಹಳ್ಳಿಗಳಿಗೂ ಹೋಗಿ ಪಕ್ಷ ಸಂಘಟನೆ ಮಾಡ್ತಿದ್ದೇವೆ. ಎಲ್ಲಾ ವರ್ಗವನ್ನು ಒಳಗೊಂಡು ಪಕ್ಷ ಸಂಘಟನೆ ಮಾಡ್ತಿದ್ದೇವೆ. ಕೇಂದ್ರ ಸರ್ಕಾರ ಮೂರು ಕೃಷಿ ಮಸೂದೆ ವಾಪಸ್ ಪಡೆದಿದೆ. ಆದರೆ, ಯಾಕೆ ರಾಜ್ಯ ಸರ್ಕಾರ ವಾಪಸ್ ಪಡೆಯುತ್ತಿಲ್ಲ. ರಿಯಲ್ ಎಸ್ಟೇಟ್ ಮಾಫಿಯಾಗೆ ಸರ್ಕಾರ ಅನುಕೂಲ ಮಾಡಿಕೊಡಲಿದೆ. ರೈತರಿಗೆ ಕಾರ್ಖಾನೆಗಳಲ್ಲಿ ತೂಕದಲ್ಲಿ ಮೋಸ ಆಗ್ತಿದೆ. ಹೀಗಾಗಿ ಆಮ್ ಆದ್ಮಿ ರೈತರ ಪರವಾಗಿ ಹೋರಾಟ ಮಾಡುತ್ತದೆ ಎಂದರು.

ಕೋಡಿಹಳ್ಳಿ ಚಂದ್ರಶೇಖರ ನಮ್ಮ ಪಕ್ಷದ ಸದಸ್ಯರೇ ಅಲ್ಲ :ರೈತ ಸಂಘದ ರಾಜ್ಯಾಧ್ಯಕ್ಷರಾಗಿದ್ದ ಕೋಡಿಹಳ್ಳಿ ಚಂದ್ರಶೇಖರ್ ನಮ್ಮ ಪಕ್ಷದ ಸದಸ್ಯರೇ ಅಲ್ಲಾ ಅಂತಾ ಆಮ್ ಆದ್ಮಿ ಪಕ್ಷದ ಉಪಾಧ್ಯಕ್ಷ ಭಾಸ್ಕರ್ ರಾವ್ ಸ್ಪಷ್ಟ‌ನೆ ನೀಡಿದ್ದಾರೆ. ಕೋಡಿಹಳ್ಳಿ ಬಗ್ಗೆ ಮಾಧ್ಯಮದಲ್ಲಿ ಬಂದಿರುವ ಕುರಿತು ಸರ್ಕಾರ ತನಿಖೆ ಮಾಡಬೇಕು. ನಮ್ಮದೇನು ಸರ್ಕಾರ ಇಲ್ಲ. ಅವರ ಮೇಲಿನ ಆರೋಪಗಳ ಬಗ್ಗೆ ಚಾರ್ಜಶೀಟ್ ಮಾಡಲಿ. ಅವರು ಕೇಜ್ರಿವಾಲ್ ನೇತೃತ್ವದಲ್ಲಿ ಪಕ್ಷಕ್ಕೆ ಬಂದು ಸೇರ್ಪಡೆ ಆಗಿದ್ದಾರೆ. ಅವರಿಗೆ ನಾವು ಪಕ್ಷದಲ್ಲಿ ಯಾವುದೇ ಹುದ್ದೆಯನ್ನ ನೀಡಿಲ್ಲ. ನಾವೇ ಮೊದಲು ಅವರ ಮೇಲೆ ಪೊಲೀಸ್ ಕೇಸ್ ದಾಖಲಿಸುವಂತೆ ಹೇಳಿದ್ದೇವೆ. ಅವರು ನಮ್ಮ ಪಕ್ಷದ ಪ್ರಾಥಮಿಕ ಸದಸ್ಯರೇ ಅಲ್ಲ. ಯಾರೋ ಟೋಪಿ ಹಾಕಿದರೆಂದರೆ ಪಕ್ಷದ ಸದಸ್ಯರು ಆಗಲ್ಲ. ಪಕ್ಷದ ಸದಸ್ಯತ್ವ ಪಡೆಯಬೇಕು. ಆದ್ರೆ, ಕೋಡಿಹಳ್ಳಿ ಚಂದ್ರಶೇಖರ ನಮ್ಮ ಪಕ್ಷದ ಸದಸ್ಯ ಅಲ್ಲ ಎಂದು ಭಾಸ್ಕರ್ ರಾವ್ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮದಗೋಷ್ಟಿಯಲ್ಲಿ ಆಮ್ ಆದ್ಮಿ ಪಕ್ಷದ ಉತ್ತರ ಕರ್ನಾಟಕ ಉಸ್ತುವಾರಿ ರಾಜಕುಮಾರ್ ಟೋಪಣ್ಣವರ, ವಿಜಯ್ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಓದಿ :ಮೋದಿ ಸರ್ಕಾರ ಬಂದ ಮೇಲೆ ದೇಶದ ಬಡತನ ರೇಖೆ ಶೇ.22ರಿಂದ 10ಕ್ಕೆ ಇಳಿಕೆ: ಬೊಮ್ಮಾಯಿ ಸರ್ಕಾರಕ್ಕೂ ನಡ್ಡಾ ಮೆಚ್ಚುಗೆ

For All Latest Updates

ABOUT THE AUTHOR

...view details