ಕರ್ನಾಟಕ

karnataka

ETV Bharat / state

ಮೊಬೈಲ್ ಚಾರ್ಜ್ ಹಾಕಲು ಹೋದ ಯುವಕ ವಿದ್ಯುತ್​ ತಗುಲಿ ಸಾವು - ವಿದ್ಯಾರ್ಥಿ ಅನುಮಾನಾಸ್ಪದ ಸಾವು

ಮೊಬೈಲ್​ ಚಾರ್ಜ್​ ಹಾಕುವ ವೇಳೆ ಆಕಸ್ಮಿಕವಾಗಿ ಕೈಗೆ ವಿದ್ಯುತ್​ ತಗುಲಿ ಯುವಕ ಸಾವನ್ನಪ್ಪಿದ್ದಾನೆ.

A young man died while putting his mobile to charge
ಮೊಬೈಲ್ ಚಾರ್ಜ್ ಹಾಕಲು ಹೋದ ಯುವಕ ವಿದ್ಯುತ್​ ತಗುಲಿ ಸಾವು

By

Published : Jul 27, 2023, 3:36 PM IST

ಚಿಕ್ಕೋಡಿ: ಮೊಬೈಲ್ ಚಾರ್ಜ್ ಹಾಕಲು ಹೋಗಿ ಯುವಕ ವಿದ್ಯುತ್ ತಗುಲಿ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕೋಡಿಯಲ್ಲಿ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಶಿರಪ್ಪೆವಾಡಿ ಗ್ರಾಮದ ಆಕಾಶ ಸಂಕಪಾಳ (27) ಸಾವನ್ನಪ್ಪಿದ ದುರ್ದೈವಿ ಎಂದು ಗುರುತಿಸಲಾಗಿದೆ.

ಮುಂಜಾನೆ ಎಂಟು ಗಂಟೆ ಸುಮಾರಿಗೆ ಮನೆಯಲ್ಲಿ ಮೊಬೈಲ್ ಚಾರ್ಚ್ ಹಾಕುವುದಕ್ಕೆ ಯುವಕ ಮುಂದಾಗಿದ್ದಾನೆ. ಆಕಸ್ಮಿಕವಾಗಿ ವಿದ್ಯುತ್ ಕೈಗೆ ತಗುಲಿ ಸಾವು ಸಂಭವಿಸಿದೆ ಎಂದು ಮೃತ ಯುವಕನ ತಂದೆ ನಿಪ್ಪಾಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ನಿಪ್ಪಾಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿಪ್ಪಾಣಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಬೆಳಗಾವಿ ಎಸ್ಪಿ ಡಾ ಸಂಜೀವ್​ ಪಾಟೀಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ವಿದ್ಯುತ್​ ತಗುಲಿ ಯುವಕ ಸಾವು: ಜಿಮ್​ನಲ್ಲಿ ಟ್ರೆಡ್​ಮಿಲ್​ ಮೇಲೆ ರನ್ನಿಂಗ್​ ಮಾಡುತ್ತಿದ್ದ ವೇಳೆ ವಿದ್ಯುತ್​ ಹರಿದು ಯುವಕ ಸಾವನಪ್ಪಿರುವ ಘಟನೆ ಇತ್ತೀಚೆಗೆ ನವದೆಹಲಿಯಲ್ಲಿ ನಡೆದಿತ್ತು. ದೆಹಲಿಯ ರೋಹಿಣಿ ಪ್ರದೇಶದ ಸಕ್ಷಮ್​ ಸಾವನ್ನಪ್ಪಿರುವ ಯುವಕ. ಎಂದಿನಂತೆ ಬೆಳಗ್ಗೆ ರೋಹಿಣಿ ಪ್ರದೇಶದಲ್ಲಿರುವ ಜಿಮ್​ಗೆ ಬಂದಿದ್ದ ಸಕ್ಷಮ್​ ಟ್ರೆಡ್​ಮಿಲ್​ನಲ್ಲಿ ರನ್ನಿಂಗ್​ ಮಾಡುತ್ತಿದ್ದ. ಈ ವೇಳೆ, ವಿದ್ಯುತ್​ ಪ್ರವಹಿಸಿ ಸಕ್ಷಮ್​ ಅಲ್ಲೇ ಕುಸಿದು ಬಿದ್ದಿದ್ದನು. ತಕ್ಕಣವೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಸಕ್ಷಮ್​ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದ್ದನು. ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಹಂತದಲ್ಲಿ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದರು.

ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಬೆಳಗ್ಗೆ ಕಾಲೇಜಿಗೆಂದು ಹೋದ ವಿದ್ಯಾರ್ಥಿ ಸಂಜೆ ಹೊತ್ತಿಗೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಘಟನೆ ಇತ್ತೀಚೆಗೆ ಬೆಂಗಳೂರಿನ ಹೆಣ್ಣೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಬೆಳಗ್ಗೆ ಕಾಲೇಜಿಗೆ ಎಂದು ಹೋದ ಮಗ ಇನ್ನೂ ಮನೆಗೆ ಬಂದಿಲ್ಲ ಎಂದು ತಂದೆ ತಾಯಿ ಕೂಡ ಆತಂಕದಲ್ಲೇ ಕಾಯುತ್ತಿದ್ದರು. ಆದರೆ, ಸಂಜೆ ಹೊತ್ತಿಗಾಗಲೇ ವಿದ್ಯಾರ್ಥಿ ಮಾರ್ವೇಶ್​ನನ್ನು ಸುನೀಲ್​ ಎಂಬಾತ ಆಸ್ಪತ್ರೆಗೆ ದಾಖಲು ಮಾಡಿದ್ದನು. ಮಾರ್ವೇಶ್​ನನ್ನು ಆಸ್ಪತ್ರೆ ವೈದ್ಯರು ಪರೀಕ್ಷಿಸಿ, ಆತ ಸಾವನ್ನಪ್ಪಿರುವುದಾಗಿ ತಿಳಿಸಿದ್ದರು. ಈ ಬಗ್ಗೆ ವಿದ್ಯಾರ್ಥಿ ಮಾರ್ವೇಶ್​ನ ಪೋಷಕರು ಹೆಣ್ಣೂರು ಪೊಲೀಸ್​ ಠಾಣೆಯಲ್ಲಿ ಮಗನನ್ನು ಕೊಲೆ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದು, ಕೆಲವರ ಮೇಲೆ ಅನುಮಾನ ವ್ಯಕ್ತಪಡಿಸಿ, ತನಿಖೆ ನಡೆಸುವಂತೆ ಒತ್ತಾಯಿಸಿದ್ದರು.

ಇದನ್ನೂ ಓದಿ:ಜಿಮ್‌ನಲ್ಲಿ ಟ್ರೆಡ್​ಮಿಲ್​ ಮೇಲೆ ಓಡುವಾಗ​ ವಿದ್ಯುತ್​ ಪ್ರವಹಿಸಿ ಯುವಕ ಸಾವು

ABOUT THE AUTHOR

...view details