ಚಿಕ್ಕೋಡಿ:ಕೃಷ್ಣಾ ನದಿಯಲ್ಲಿ ಈಜಲು ಹೋಗಿ ಕೆಸರಿನಲ್ಲಿ ಸಿಲುಕಿ ಯುವಕನೋರ್ವ ಮೃತಪಟ್ಟ ಘಟನೆ ತಾಲೂಕಿನ ಮಾಂಜರಿ ಗ್ರಾಮದಲ್ಲಿ ನಡೆದಿದೆ.
ಚಿಕ್ಕೋಡಿಯಲ್ಲಿ ಕೃಷ್ಣಾ ನದಿಗೆ ಈಜಲು ಹೋಗಿ ಸಾವಿಗೀಡಾದ ಯುವಕ - chikkodi young man death news
ಗೆಳೆಯರ ಜೊತೆ ಕೃಷ್ಣಾ ನದಿಗೆ ಈಜಲು ಹೋದಾಗ ಕೆಸರಿನಲ್ಲಿ ಸಿಲುಕಿಕೊಂಡು ಮೇಲಕ್ಕೆ ಬರಲಾಗದೆ ನೀರಿನಲ್ಲಿ ಮುಳಗಿ ಮೃತಪಟ್ಟ ಘಟನೆ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ನಡೆದಿದೆ. ಅಲಂ ದಾದಾಸಾಬ ತರಾಳ ಮೃತ ಯುವಕ ಎಂದು ಗುರುತಿಸಲಾಗಿದೆ.
ಈಜಲು ಹೋಗಿ ಸಾವಿಗೀಡಾದ ಯುವಕ
ಅಲಂ ದಾದಾಸಾಬ ತರಾಳ (19) ಮೃತಪಟ್ಟ ಯುವಕ. ಗೆಳೆಯರ ಜೊತೆ ಕೃಷ್ಣಾ ನದಿಗೆ ಈಜಲು ಹೋದಾಗ ಕೆಸರಿನಲ್ಲಿ ಸಿಲುಕಿಕೊಂಡು ಮೇಲಕ್ಕೆ ಬರಲಾಗದೆ ನೀರಿನಲ್ಲಿ ಮುಳಗಿದ್ದಾನೆ. ಸ್ಥಳೀಯರ ಸಹಾಯದಿಂದ ಆತನನ್ನು ನದಿಯಿಂದ ಹೊರ ತೆಗೆದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯಲ್ಲಿ ಮೃತಪಟ್ಟಿದ್ದಾನೆ.
ಈ ಕುರಿತು ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.