ಕರ್ನಾಟಕ

karnataka

ETV Bharat / state

ರಸ್ತೆಯಲ್ಲಿ ಬಿದ್ದ ಗುಂಡಿಗಳನ್ನು ಮುಚ್ಚಿದ ಯುವಕ: ಸಾಮಾಜಿಕ ಜಾಲತಾಣದಲ್ಲಿ ಫುಲ್​​ ಫೇಮಸ್

ಕುಂಭದ್ರೋಣ ನಿದ್ರೆಯಲ್ಲಿರುವ ಅಧಿಕಾರಿಗಳಿಗೆ ನಿದ್ದೆಗೆಡಿಸಿದ ಈ ಯುವಕ ರಸ್ತೆಯಲ್ಲಿರುವ ಬೃಹತ್ ಪ್ರಮಾಣದ ಗುಂಡಿಗಳನ್ನು ಮುಚ್ಚುವ ಮೂಲಕ ಪರೋಕ್ಷವಾಗಿ ರಾಜಕಾರಣಿ, ಅಧಿಕಾರಿಗಳಿಗೆ ಛೀಮಾರಿ ಹಾಕಿದ್ದಾನೆ. ಅಷ್ಟಕ್ಕೂ ಆ ಯುವಕ ಯಾರು ಅಂತಿರಾ ಈ ಸ್ಟೋರಿ ನೋಡಿ.

By

Published : Nov 11, 2019, 10:21 PM IST

ರಸ್ತೆಯಲ್ಲಿ ಬಿದ್ದ ಗುಂಡಿಗಳನ್ನು ಮುಚ್ಚಿದ ಯುವಕ

ಚಿಕ್ಕೋಡಿ:ಯುವಕನೋರ್ವ ತನ್ನ ಸ್ವಂತ ಖರ್ಚಿನಲ್ಲಿ ಬೈಕ್​ ಮುಖಾಂತರ ಇಟ್ಟಿಗೆಗಳನ್ನು ತಂದು ರಸ್ತೆಗುಂಡಿಗಳನ್ನು ಮುಚ್ಚುವ ಮೂಲಕ ಸಮಾಜ ಸೇವೆಗೆ ಮುಂದಾಗಿದ್ದಾನೆ. ಈ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ನಡೆದಿದೆ.

ಯಡೂರ ಗ್ರಾಮದ ಕಿರಣ ಕೋಳಿ ಎಂಬ ಯುವಕ ರಸ್ತೆಗಳಲ್ಲಿ ಬಿದ್ದಂತಹ ಬೃಹತ್ ಪ್ರಮಾಣದ ತಗ್ಗು ಗುಂಡಿಗಳನ್ನು ಮುಚ್ಚುತ್ತಿರುವ ಯುವಕ. ಈ‌ ಮೂಲಕ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಪರೋಕ್ಷವಾಗಿ ಛೀಮಾರಿ ಹಾಕಿದ್ದಾನೆ. ಸದ್ಯ ಕಿರಣ ಕೋಳಿ ಎಂಬ ಯುವಕ ಗುಂಡಿಗಳನ್ನು ಮುಚ್ಚುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಪೋಟೋಗಳನ್ನು ನೋಡಿದ ಚಿಕ್ಕೋಡಿ ಪಟ್ಟಣದ ಸಮಾಜಸೇವಕರಾದ ಚಂದ್ರಕಾಂತ ಹುಕ್ಕೇರಿ ಅವರು ಇಂತಹ ಯುವಕರು ಮುಂದೆ ಬರಬೇಕು ಎಂದು ಪ್ರಶಂಸಿದ್ದಾರೆ.

ರಸ್ತೆಯಲ್ಲಿ ಬಿದ್ದ ಗುಂಡಿಗಳನ್ನು ಮುಚ್ಚಿದ ಯುವಕ

ಇನ್ನೂ ಚಿಕ್ಕೋಡಿ ಮಿರಜ ರಸ್ತೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ತಗ್ಗು ಗುಂಡಿಗಳು ಬಿದ್ದಿವೆ. ಇಂತಹ ಗಂಭಿರ ಸಮಸ್ಯೆಯನ್ನು ಅರಿತಂತಹ ಯುವಕ ಕಿರಣ ಕೋಳಿಯು ಖಾಸಗಿ ಬ್ಯಾಂಕಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದು. ನಿನ್ನೆ ಕೆಲಸಕ್ಕೆ ರಜೆ ಇದ್ದ ಕಾರಣ ಸ್ವಂತ ಖರ್ಚಿನಲ್ಲಿ ಇಟ್ಟಿಗೆಗಳನ್ನು ಖರೀದಿಸಿ ರಸ್ತೆಗಳ ಮೇಲೆ ಬಿದ್ದಂತಹ ಗುಂಡಿಗಳನ್ನು ಮುಚ್ಚುವ ಮೂಲಕ ಪ್ರಯಾಣಿಕರಿಗೆ ಸುಖಕರ ಪ್ರಯಾಣ ಹಾಗೂ ಗುಂಡಿಗಳಿಂದ ಆಗುವ ಸ್ಯಮಸ್ಯೆಗಳನ್ನು ತೆಡೆಯಲು ಮುಂದಾಗಿದ್ದಾನೆ.

ABOUT THE AUTHOR

...view details