ಬೆಳಗಾವಿ: ಹೊರಗೆ ಹೋಗಿ ಬರುವುದಾಗಿ ಮನೆಯಿಂದ ಹೊರಟ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಇಲ್ಲಿನ ರೈತಗಲ್ಲಿಯಲ್ಲಿ ನಡೆದಿದೆ. ಮೂಲತಃ ಬೆಂಗಳೂರಿನ ಆನೇಕಲ್ ತಾಲೂಕಿನ ಜಿಗಣಿ ಗ್ರಾಮದ ನಿವಾಸಿ ಜ್ಯೋತಿ ಹಿಕ್ಕಡಿ(20) ನಾಪತ್ತೆಯಾದ ಯುವತಿ ಎಂದು ತಿಳಿದು ಬಂದಿದೆ.
ಬೆಳಗಾವಿ ಸಂಬಂಧಿಕರ ಮನೆಗೆ ಬಂದಿದ್ದ ಯುವತಿ ನಾಪತ್ತೆ - Etv Bharat kannada news
ಮನೆಯಿಂದ ಹೊರ ಹೋಗಿ ಬರುವುದಾಗಿ ಹೊರಟ ಯುವತಿ ನಾಪತ್ತೆಯಾಗಿರುವ ಘಟನೆ ಬೆಳಗಾವಿ ರೈತಗಲ್ಲಿಯಲ್ಲಿ ನಡೆದಿದೆ.
ಬೆಳಗಾವಿ ಸಂಬಂಧಿಕರ ಮನೆಗೆ ಬಂದಿದ್ದ ಯುವತಿ ನಾಪತ್ತೆಬೆಳಗಾವಿ ಸಂಬಂಧಿಕರ ಮನೆಗೆ ಬಂದಿದ್ದ ಯುವತಿ ನಾಪತ್ತೆ
ವಿಜಯಪುರ ಜಿಲ್ಲೆಯ ಮಾದಾಪಟ್ಟಣದಲ್ಲಿ ಜ್ಯೋತಿ ಅವರ ತಂದೆ ಶ್ರೀಶೈಲ ಹಿಕ್ಕಡಿ ವಾಸವಾಗಿದ್ದರು. ಕಳೆದ ಹದಿನೈದು ದಿನಗಳ ಹಿಂದೆಯಷ್ಟೇ ಬೆಳಗಾವಿ ನಗರದ ರೈತ ಗಲ್ಲಿಯಲ್ಲಿ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದ ಯುವತಿ, ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂದು ಯುವತಿ ತಂದೆ ಹೇಳಿದ್ದಾರೆ. ಈ ಸಂಬಂಧ ಶಾಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ :ಚಿಕ್ಕಬಳ್ಳಾಪುರ: ಕಳ್ಳತನವಾಗಿ 5 ದಿನಗಳಾದರೂ ಕೇಸು ದಾಖಲಿಸದ ಪೊಲೀಸರು