ಕರ್ನಾಟಕ

karnataka

ETV Bharat / state

ವಿವಾಹೇತರ ಸಂಬಂಧ ಬಿಡು ಎಂದ ಪತಿಯನ್ನೇ ಪರಲೋಕಕ್ಕೆ ಕಳಿಸಿದ್ಲು ಪತ್ನಿ! - ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯರಗಟ್ಟಿ

ವಿವಾಹೇತರ ಸಂಬಂಧ ಬಿಟ್ಟು ಬಿಡು ಎಂದು‌ ಬುದ್ಧಿವಾದ ಹೇಳಿದ ಪತಿಯನ್ನೇ ಪತ್ನಿ ಕತ್ತು ಹಿಸುಕಿ ಕೊಲೆ ಮಾಡಿರುವ ಆರೋಪ ಪ್ರಕರಣ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

A wife who killed her husband
ಪತಿಯನ್ನೇ ಕೊಂದ ಪತ್ನಿ

By

Published : Mar 4, 2020, 3:22 PM IST

ಬೆಳಗಾವಿ: ವಿವಾಹೇತರ ಸಂಬಂಧ ಬಿಡು ಎಂದು‌ ಬುದ್ಧಿವಾದ ಹೇಳಿದ್ದಕ್ಕೆ ಕೆರಳಿದ ಪತ್ನಿವೋರ್ವಳು ಪತಿಯ ಕತ್ತು ಹಿಸುಕಿ ಕೊಲೆಗೈದಿರುವ ಆರೋಪ ಪ್ರಕರಣ ಸವದತ್ತಿ ತಾಲೂಕಿನ ಯರಗಟ್ಟಿಯಲ್ಲಿ ನಡೆದಿದೆ.

ಸಿದ್ದಪ್ಪ ಚುಂಚನೂರ (25) ಹತ್ಯೆಯಾಗಿರುವ ವ್ಯಕ್ತಿ. ಸಿದ್ದಪ್ಪನ ಪತ್ನಿ ಕೌಶಲ್ಯ ಈ ಕೃತ್ಯ ಎಸಗಿರುವ ಆರೋಪಿ. ರಾತ್ರಿ ಮಲಗಿದ್ದಾಗ ಹಗ್ಗದಿಂದ ಸಿದ್ದಪ್ಪನ ಕುತ್ತಿಗೆ ಬಿಗಿದು ಕೌಶಲ್ಯ ಕೊಲೆ ಮಾಡಿದ್ದಾಳೆ. ಕೌಶಲ್ಯಗೆ ಬೇರೆ ವ್ಯಕ್ತಿ ಜತೆಗೆ ವಿವಾಹೇತರ ಸಂಬಂಧ ಇದೆ ಎನ್ನಲಾಗ್ತಿದೆ.

ಈ ವಿಷಯ ತಿಳಿಯುತ್ತಿದ್ದಂತೆ ಸಿದ್ದಪ್ಪ ಪತ್ನಿಗೆ‌ ಬುದ್ಧಿವಾದ ಹೇಳಿದ್ದ. ಇದರಿಂದ ಕುಪಿತಗೊಂಡ ಕೌಶಲ್ಯಳು ತನ್ನ ಪತಿ ಸಿದ್ದಪ್ಪ ರಾತ್ರಿ ಮಲಗಿದ್ದಾಗ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾಳೆ ಎಂದು. ಕೊಲೆಯಾದ ಸಿದ್ದಪ್ಪನ ತಂದೆ ಮಾಯಪ್ಪ ಮುರಗೋಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ABOUT THE AUTHOR

...view details