ಹುಕ್ಕೇರಿ:ಗ್ರಾಮಕ್ಕೆ ನೀರು ಬಿಡಲು ಹೋದ ವಾಟರ್ಮ್ಯಾನ್ ನೀರುಪಾಲಾಗಿದ್ದು, ಅಗ್ನಿಶಾಮಕ ದಳದಿಂದ ತೀವ್ರ ಶೋಧ ಕಾರ್ಯ ಮುಂದುವರೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಶಿರಢಾಣ ಬಳಿ ಹಿರಣ್ಯಕೇಶಿ ನದಿಯ ದಡದಲ್ಲಿ ನಡೆದಿದೆ.
ವಾಟರ್ಮ್ಯಾನ್ ನೀರುಪಾಲು... ಮೊಸಳೆಗೆ ಬಲಿಯಾಗಿರುವ ಶಂಕೆ! - ಹುಕ್ಕೇರಿಯಲ್ಲಿ ವಾಟರ್ ಮ್ಯಾನ್ ನೀರುಪಾಲು,
ಗ್ರಾಮಕ್ಕೆ ನೀರು ಬಿಡಲು ಹೋದ ವಾಟರ್ಮ್ಯಾನ್ ನೀರುಪಾಲಾಗಿದ್ದು, ಮೊಸಳೆ ತಿಂದಿರುವ ಶಂಕೆ ವ್ಯಕ್ತವಾಗಿರುವ ಘಟನೆ ಹುಕ್ಕೇರಿ ತಾಲೂಕಿನಲ್ಲಿ ನಡೆದಿದೆ.
ಗ್ರಾಮಕ್ಕೆ ನೀರು ಬಿಡಲು ಹೋಗಿದ್ದ ವಾಟರ್ ಮ್ಯಾನ್ ನೀರುಪಾಲು
ಪಾಮಲದಿನ್ನಿ ಗ್ರಾಮ ಪಂಚಾಯತಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಾಟರ್ಮ್ಯಾನ್ ಬಸವರಾಜ ಹರಿಜನ (32) ಬೆಳಗ್ಗೆ ನೀರು ಬಿಡಲು ಹೋಗಿದ್ದರು. ಜಾಕ್ವೆಲ್ ದುರಸ್ತಿಗೆ ನದಿಗೆ ಇಳಿದಿದ್ದ ಎನ್ನಲಾಗಿದೆ. ಅಗ್ನಿಶಾಮಕ ದಳದಿಂದ ವಾಟರ್ಮ್ಯಾನ್ ಶವಕ್ಕಾಗಿ ತೀವ್ರ ಹುಡುಕಾಟ ನಡೆದಿದ್ದು, ನೀರಿನಲ್ಲಿನ ಮೊಸಳೆ ದಾಳಿ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.