ಕರ್ನಾಟಕ

karnataka

ETV Bharat / state

ಬಿಮ್ಸ್ ಅವ್ಯವಸ್ಥೆ.. ನನ್ನನ್ನು ಅಥಣಿಗೆ ಶಿಫ್ಟ್​ ಮಾಡಿ ಎಂದು ಕೊರೊನಾ ರೋಗಿ ಸಿಎಂಗೆ ಟ್ವೀಟ್​ - Corona case in Belgaum

ದಯವಿಟ್ಟು ನನ್ನನ್ನು ಅಥಣಿಗೆ ಸ್ಥಳಾಂತರಿಸಿ ಎಂದು ಅಥಣಿ ತಾಲೂಕಿನ ಕೊರೊನಾ ಸೋಂಕಿತ ಯುವಕನೊಬ್ಬ ಸಿಎಂ ಹಾಗೂ ಸಚಿವರಿಗೆ ಟ್ವೀಟ್ ಮಾಡಿ ತನ್ನ ಅಳಲು ತೋಡಿಕೊಂಡಿದ್ದಾನೆ..

dsd
ಕೊರೊನಾ ರೋಗಿ ಸಿಎಂಗೆ ಟ್ವೀಟ್​

By

Published : Jul 17, 2020, 6:49 PM IST

ಬೆಳಗಾವಿ: ಕೊರೊನಾ ಸೋಂಕಿತನೊಬ್ಬ ಬಿಮ್ಸ್ ಆಸ್ಪತ್ರೆ ದುಸ್ಥಿತಿ ಕುರಿತು ಸಿಎಂ ಬಿಎಸ್‌ವೈ, ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಆರೋಗ್ಯ ಸಚಿವ ಶ್ರೀರಾಮುಲುಗೆ ಟ್ವೀಟ್ ಮೂಲಕ ಮನವಿ ಮಾಡಿದ್ದಾನೆ.

ಕೊರೊನಾ ರೋಗಿ ಸಿಎಂಗೆ ಟ್ವೀಟ್​

ಬಿಮ್ಸ್ ಆಸ್ಪತ್ರೆ ಸ್ಥಿತಿ ನೋಡಿದ್ರೆ ಮತ್ತೆ ಬೇರೆ ರೋಗ ಬರುವ ಲಕ್ಷಣ ಕಾಣುತ್ತಿದೆ. ದಯವಿಟ್ಟು ನನ್ನನ್ನು ಅಥಣಿಗೆ ಸ್ಥಳಾಂತರಿಸಿ ಎಂದು ಅಥಣಿ ತಾಲೂಕಿನ ಕೊರೊನಾ ಸೋಂಕಿತ ಯುವಕನೊಬ್ಬ ಸಿಎಂ ಹಾಗೂ ಸಚಿವರಿಗೆ ಟ್ವೀಟ್ ಮಾಡಿ ತನ್ನ ಅಳಲು ತೋಡಿಕೊಂಡಿದ್ದಾನೆ.

ತಾಲೂಕಿನ ಹಾಲಭಾವಿಯಲ್ಲಿ ಎ ಸಿಂಪ್ಟಮೆಟಿಕ್ ರೋಗಿಗಳಿಗೆ ಪ್ರತ್ಯೇಕ 80 ಬೆಡ್​ಗಳ ವ್ಯವಸ್ಥೆ ಮಾಡಿದ್ದಾರೆ. ಆದರೆ, ಅಲ್ಲಿಗೆ ಕೇವಲ 16 ರೋಗಿಗಳನ್ನು ಮಾತ್ರ ಶಿಫ್ಟ್ ಮಾಡಲಾಗಿದೆ. ಇನ್ನುಳಿದ ಎ ಸಿಂಪ್ಟಮೆಟಿಕ್ ಸೋಂಕಿತರನ್ನು ಅಲ್ಲಿಯೇ ಸ್ಥಳಾಂತರ ಮಾಡಬೇಕು ಎಂಬುವುದು ಈತ ಟ್ವೀಟ್​ ಮೂಲಕ ಆಗ್ರಹಿಸಿದ್ದಾನೆ.

ABOUT THE AUTHOR

...view details