ಕರ್ನಾಟಕ

karnataka

ETV Bharat / state

ಚಿಕ್ಕೋಡಿ : ಮನೆ ಕಳ್ಳತನಕ್ಕೆ ಬಂದು ಬಾಲಕಿಯನ್ನ ಅಪಹರಿಸಿದ ಖತರ್ನಾಕ್​​​ ಕಳ್ಳ - ಚಿಕ್ಕೋಡಿಯಲ್ಲಿ ಮನೆ ಕಳ್ಳತನಕ್ಕೆ ಬಂದು ಬಾಲಕಿಯನ್ನ ಅಪಹರಿಸಿದ ಕಳ್ಳ

ಸುರೇಶ್ ಕಾಂಬಳೆ ಎಂಬುವರ 11ವರ್ಷದ ಮಗಳನ್ನ ಅಪಹರಣ ಮಾಡಲಾಗಿದೆ ಎನ್ನಲಾಗಿದೆ. ಸದ್ಯ ಬಾಲಕಿಗಾಗಿ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದಾರೆ. ಬಾಲಕಿ ಕಾಣೆಯಾದ ಬಗ್ಗೆ ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌..

ಬಾಲಕಿಯನ್ನ ಅಪಹರಿಸಿದ ಖತರ್ನಾಕ್​​​ ಕಳ್ಳ
ಬಾಲಕಿಯನ್ನ ಅಪಹರಿಸಿದ ಖತರ್ನಾಕ್​​​ ಕಳ್ಳ

By

Published : Apr 4, 2022, 3:23 PM IST

ಚಿಕ್ಕೋಡಿ :ಕಳ್ಳತನ ಮಾಡಲು ಮನೆಗೆ ನುಗ್ಗಿದ ಖದೀಮನೊಬ್ಬ ಚಿನ್ನಾಭರಣ ಕಳ್ಳತನ ಮಾಡೋ ಬದಲು ಮನೆಯಲ್ಲಿದ್ದ ಬಾಲಕಿಯನ್ನು ಅಪಹರಿಸಿರುವ ವಿಚಿತ್ರ ಘಟನೆ ಮಾಂಜರಿವಾಡಿ ಗ್ರಾಮದಲ್ಲಿ ನಡೆದಿದೆ. ಚಿಕ್ಕೋಡಿ ತಾಲೂಕಿನ ಮಾಂಜರಿವಾಡಿ ಅನಿಲ್ ರಾಮು ಲಂಬೂಗೋಳ (31) ಎಂಬ ಯುವಕ ಬಾಲಕಿ ಅಪಹರಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಸುರೇಶ್ ಕಾಂಬಳೆ ಎಂಬುವರ 11ವರ್ಷದ ಮಗಳನ್ನ ಅಪಹರಣ ಮಾಡಲಾಗಿದೆ ಎನ್ನಲಾಗಿದೆ. ಸದ್ಯ ಬಾಲಕಿಗಾಗಿ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದಾರೆ. ಬಾಲಕಿ ಕಾಣೆಯಾದ ಬಗ್ಗೆ ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ABOUT THE AUTHOR

...view details