ಕರ್ನಾಟಕ

karnataka

ETV Bharat / state

ಆರು ವರ್ಷ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿದ್ದ ಕಳ್ಳ ಸಿಕ್ಕಿಬಿದ್ದಿದ್ದು ಬರೀ ಬೆರಳಚ್ಚಿನಿಂದ.. - haveri news

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕಮಲಾನಗರ ತಾಂಡಾ‌ ನಿವಾಸಿ ಕೃಷ್ಣ ಲಚ್ಚಪ್ಪ ಲಮಾಣಿ (28) ಎಂಬಾತನನ್ನು ‌ಬಂಧಿಸಿರುವ ಪೊಲೀಸರು ‌ಆತನಿಂದ‌ 1.19 ಲಕ್ಷ ರೂಪಾಯಿ ಮೌಲ್ಯದ 369 ಗ್ರಾಂ ಚಿನ್ನದ ‌ಸರ ವಶಪಡಿಸಿಕೊಂಡಿದ್ದಾರೆ.

ಫಿಂಗರ್ ಪ್ರಿಂಟ್ ಸಹಾಯದಿಂದ 6 ವರ್ಷದ ನಂತರ ಸಿಕ್ಕಿಬಿದ್ದ ಕಳ್ಳ

By

Published : Oct 1, 2019, 11:08 PM IST

ಬೆಳಗಾವಿ:ಫಿಂಗರ್ ಪ್ರಿಂಟ್ ಸಹಾಯದಿಂದ ಆರು ವರ್ಷಗಳ ಹಿಂದೆ ನಡೆದಿದ್ದ ಮನೆಗಳ್ಳತನ ಪ್ರಕರಣವನ್ನು ಹಿರೇಬಾಗೇವಾಡಿ ಠಾಣೆಯ ‌ಪೊಲೀಸರು ಭೇದಿಸಿದ್ದಾರೆ.

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕಮಲಾನಗರ ತಾಂಡಾ‌ ನಿವಾಸಿ ಕೃಷ್ಣ ಲಚ್ಚಪ್ಪ ಲಮಾಣಿ (28) ಎಂಬಾತನನ್ನು ‌ಬಂಧಿಸಿರುವ ಪೊಲೀಸರು ‌ಆತನಿಂದ‌ 1.19 ಲಕ್ಷ ರೂಪಾಯಿ ಮೌಲ್ಯದ 369 ಗ್ರಾಂ ಚಿನ್ನದ ‌ಸರ ವಶಪಡಿಸಿಕೊಂಡಿದ್ದಾರೆ.ಹಿರೇಬಾಗೇವಾಡಿ ಠಾಣೆಯ ವ್ಯಾಪ್ತಿಯಲ್ಲಿ 2014 ರಂದು ಮನೆಬಾಗಿಲು ಮುರಿದು ಕೃಷ್ಣಾ 39 ಗ್ರಾಂ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದ. ಅಂದಿನಿಂದ ಆರೋಪಿ ನಾಪತ್ತೆ ಆಗಿದ್ದ. ಕಳ್ಳತನವಾದ ಸ್ಥಳ ಪರಿಶೀಲನೆ ವೇಳೆ ಪೊಲೀಸರು ದಾಖಲಿಸಿಕೊಂಡಿದ್ದ ಫಿಂಗರ್ ‌ಪ್ರಿಂಟ್ ದಾಖಲೆಯ ಆಧಾರದ ಮೇಲೆ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ ಸರ ಕಳ್ಳತನ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆತನ ಬಳಿಯಿದ್ದ ಸರವನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಹಿರೇಬಾಗೇವಾಡಿ ಠಾಣೆಯ ಫಿಂಗರ್ ಪ್ರಿಂಟ್ ವಿಭಾಗದ ಇನ್ಸ್‌ಪೆಕ್ಟರ್​ ‌ಮಹಾದೇವ ಕುಂಬಾರ, ಠಾಣೆಯ ಪಿಎಸ್ಐ ಎ ಹೆಚ್ ಪಠಾಣ್ ನೇತೃತ್ವದ ತಂಡ‌ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ABOUT THE AUTHOR

...view details