ಕರ್ನಾಟಕ

karnataka

ETV Bharat / state

ಒಡಿಶಾದಲ್ಲಿ ಭೀಕರ ರಸ್ತೆ ಅಪಘಾತ: ಬೆಳಗಾವಿ ಮೂಲದ ಯೋಧ ವಿಧಿವಶ - Belagavi jawan killed in road accident

ಒಡಿಶಾದಲ್ಲಿ ಎರಡು ದಿನಗಳ ಹಿಂದೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬೆಳಗಾವಿ ಮೂಲದ ಯೋಧ ಚಿಕಿತ್ಸೆ ಫಲಿಸದೇ ಇಂದು ಸಂಜೆ ವಿಧಿವಶರಾಗಿದ್ದಾರೆ.

A terrible road accident in Orissa: Belgaum based warrior dead
ಒಡಿಶಾದಲ್ಲಿ ಭೀಕರ ರಸ್ತೆ ಅಪಘಾತ: ಬೆಳಗಾವಿ ಮೂಲದ ಯೋಧ ವಿಧಿವಶ

By

Published : Sep 20, 2020, 9:24 PM IST

ಬೆಳಗಾವಿ:ಒಡಿಶಾದಲ್ಲಿ ಎರಡು ದಿನಗಳ ಹಿಂದೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬೆಳಗಾವಿ ಮೂಲದ ಯೋಧ ಚಿಕಿತ್ಸೆ ಫಲಿಸದೇ ಇಂದು ಸಂಜೆ ವಿಧಿವಶರಾಗಿದ್ದಾರೆ.

ಒಡಿಶಾದಲ್ಲಿ ಭೀಕರ ರಸ್ತೆ ಅಪಘಾತ: ಬೆಳಗಾವಿ ಮೂಲದ ಯೋಧ ವಿಧಿವಶ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲೇಶ ಶಿವಲಿಂಗಪ್ಪ ಮರಕಟ್ಟಿ (52) ಮೃತಪಟ್ಟಿದ್ದಾರೆ. 1993ರಲ್ಲಿ ಸಿಆರ್​ಪಿಎಫ್ ಸೇರಿದ್ದ ಮಲ್ಲೇಶ ಅವರು ಪ್ರಸ್ತುತ ಒಡಿಶಾದಲ್ಲಿ ಸಿಆರ್​ಪಿಎಫ್ ನಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಎರಡು ದಿನಗಳ ಹಿಂದೆ ಸರ್ಕಾರಿ ವಾಹನದಲ್ಲಿ ಕಚೇರಿಗೆ ತೆರಳುವಾಗ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮಲ್ಲೇಶ ಮರಕಟ್ಟಿ ಗಂಭೀರ ಗಾಯಗೊಂಡಿದ್ದರು. ಇವರನ್ನು ಒಡಿಶಾದ ಸಿಆರ್​ಪಿಎಫ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೇ ಇಂದು ಸಂಜೆ ಮಲ್ಲೇಶ ಮರಕಟ್ಟಿ ಅವರು ವಿಧಿವಶರಾಗಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details